ಸಿಪಿಐ (ಎಂಎಲ್)

ಮಡಿಕೇರಿ, ಮೇ ೬: ಬಿಜೆಪಿಯ ವಿರುದ್ಧ ಗೆಲುವು ಸಾಧಿಸಬಲ್ಲ ಜಾತ್ಯತೀತ ನಿಲುವಿನ ಪಕ್ಷವನ್ನು ವಿಧಾನ ಸಭಾ ಚುನಾವಣೆಯಲ್ಲಿ ಸಿಪಿಐ (ಎಂಎಲ್) ರೆಡ್ ಸ್ಟಾರ್ ಪಕ್ಷ ಬೆಂಬಲಿಸಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕೋಮುವಾದಿ ಚಿಂತನೆಗಳನ್ನು ಹೊಂದಿರುವ ಪಕ್ಷದ ಆಡಳಿತದಿಂದ ಶ್ರೀಸಾಮಾನ್ಯರ, ಮಹಿಳೆಯರ, ರೈತರು, ಕಾರ್ಮಿಕ ವರ್ಗದ ಸಂಕಷ್ಟಗಳಿಗೆ ಕಿವಿಯಾಗು ವವರು ಯಾರೂ ಇಲ್ಲ ಎನ್ನುವ ಪರಿಸ್ಥಿತಿ ನಿಮಾರ್ಣವಾಗಿದೆ. ನಿರುದ್ಯೋಗದ ಸಮಸ್ಯೆಯಿಂದ ಯುವ ಸಮೂಹ ತತ್ತರಿಸಿದ್ದು, ದುಶ್ಚಟಗಳಿಗೆ ಬಲಿಯಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಹೆಚ್.ಇ. ಸಣ್ಣಪ್ಪ ಮಾತನಾಡಿ, ಪ್ರಸ್ತುತ ಚುನಾವಣೆ ಹಿಂದುತ್ವ ಮತ್ತು ಪ್ರಜಾಪ್ರಭುತ್ವದ ಉಳಿವಿನ ವಿಚಾರಗಳ ಮೇಲೆ ನಡೆಯುತ್ತಿದೆ. ಬಿಜೆಪಿ ಸರ್ಕಾರ ನಿರೀಕ್ಷೆಯ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ಭಾವ ನಾತ್ಮಕ ವಿಚಾರಗಳನ್ನು ಮುಂದಿಟ್ಟು ಕೊಂಡು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ಟಿ. ಚಂಗಪ್ಪ, ಹೆಚ್.ಜಿ. ಜಯಣ್ಣ, ಕುಶಾಲನಗರ ಹೋಬಳಿ ಘಟಕದ ಸದಸ್ಯ ಹೆಚ್.ಎಸ್. ರಾಕೇಶ್ ಉಪಸ್ಥಿತರಿದ್ದರು.