ವೀರಾಜಪೇಟೆ, ಮೇ ೬: ಚುನಾವಣೆಯ ಹೊಸ್ತಿಲಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿ, ಹಾಗೂ ಪಕ್ಷದ ಕಾರ್ಯಕ್ರಮದ ಪರ ಮತ ಪ್ರಚಾರ ಮಾಡುವುದು ಸಹಜ. ಆದರೆ ವ್ಯಕ್ತಿಯೋರ್ವನ ತೇಜೋವಧೆೆಗೆ ಶ್ರಮಿಸಿ ಅವಹೇಳನ ಮಾಡುವಂತೆ ಬಿಂಬಿಸಿಕೊAಡು ಮತ ಪ್ರಚಾರ ಮಾಡುವುದು ಶೋಭೆಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಘಟಕದಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನೆಲೆಸಿರುವ ಕೊಡವ ಜನಾಂಗದವರು ಹಲವಾರು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿ ಜನಮಾನಸದಲ್ಲಿ ಹೆಸರುಗಳಿಸಿದ್ದಾರೆ. ಚುನಾವಣೆಯಲ್ಲಿ ಕೊಡವ ಜನಾಂಗದ ವ್ಯಕ್ತಿ ಸ್ಪರ್ಧಾ ಕಣದಲ್ಲಿದ್ದಾರೆ. ನಾಟಕ ರಂಗದಿAದ ಬಂದ ಅಡ್ಡಂಡ ಕಾರ್ಯಪ್ಪ ಜನಾಂಗದ ಮಧ್ಯೆ ಒಡಕು ಮೂಡಿಸುವಂತೆ ಬಿಂಬಿಸಿದ್ದು, ಇದನ್ನೂ ಖಂಡಿಸುತ್ತೇವೆ ಎಂದರು.
ವಕೀಲರಾಗಿರುವ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದ ಉದ್ದಗಲಕ್ಕೂ ಪ್ರವಾಸ ಮಾಡಿ ಮೂಲ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರ್ವಹಿಸಿದ್ದಾರೆ. ಅವರ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ಅಭಿವೃದ್ಧಿ ಆಧಾರದ ಚುನಾವಣೆ ಹೊರತು ಜಾತಿ ಧರ್ಮದ ಆಧಾರದ ಮೇಲೆ ನಡೆಯುವ ಚುನಾವಣೆಯಲ್ಲ ಎಂದು ಅಭಿಪ್ರಾಯಪಟ್ಟರು.
ಪಕ್ಷದ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ ಕಳೆದ ೨೦ ವರ್ಷಗಳಿಂದ ಆಡಳಿತ ಮಾಡಿರುವ ಭಾ.ಜ.ಪ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ. ಜಿಲ್ಲೆಯ ಕುಗ್ರಾಮಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡದಿರುವುದು ಜನಸಾಮಾನ್ಯರಲ್ಲಿ ನಿರಾಶೆ ಮೂಡಿದೆ. ಕೇವಲ ವ್ಯಕ್ತಿಯನ್ನು ಗುರಿಯಾಗಿಸಿ ಕೊಂಡು ರಾಜಕೀಯ ಮಾಡುವುದು ಸರಿಯಾದ ಮಾರ್ಗವಲ್ಲ. ತಮ್ಮ ವಿಫಲತೆಯನ್ನು ಮರೆಮಾಚಲು ನೇರವಾಗಿ ಮಾತನಾಡಲು ಶಕ್ತವಾಗದಿರುವ ವ್ಯಕ್ತಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಪ್ರಚಾರ ಸಮಿತಿಯ ವಕ್ತಾರ ಬಿ.ಎಸ್. ತಮ್ಮಯ್ಯ, ಡಿ.ಸಿ.ಸಿ ಪ್ರಮುಖ ಕೊಲ್ಲೀರ ಬೋಪಣ್ಣ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹಾಜರಿದ್ದರು.