ವೀರಾಜಪೇಟೆ, ಮೇ ೬: ವೀರಾಜಪೇಟೆ ಹೊರವಲಯದ ಕೊಟ್ಟೋಳಿಯಲ್ಲಿ ಗ್ರಾಮಸ್ಥರು ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಈ ಭಾಗದ ಸುಮಾರು ಮೂವತ್ತು ಮನೆಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ನೀಡಿಲ್ಲ. ರಸ್ತೆ, ಚರಂಡಿ, ಬೀದಿದೀಪದ ವ್ಯವಸ್ಥೆ ಇಲ್ಲ, ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಚುನಾವಣೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಪದ್ಮಾವತಿ, ಮೀಜೇಶ್, ಪ್ರಕಾಶ್ ತಿಮ್ಮಯ್ಯ, ವಿನು, ರಾಣಿ, ವಿಜಯ, ರಮೇಶ್, ಲವ, ಮಂಜು ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.