ಕಾಂಗ್ರೆಸ್ ವಕ್ತಾರ ತಮ್ಮಯ್ಯ
ಮಡಿಕೇರಿ, ಮೇ ೬: ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರ ಬಗ್ಗೆ ಬಿಜೆಪಿ ನಾಯಕರುಗಳು ವೈಯಕ್ತಿಕ ನಿಂದನೆ ಮಾಡುತ್ತಿರು ವದು ಸರಿಯಲ್ಲವೆಂದು ಕಾಂಗ್ರೆಸ್ ವೀರಾಜಪೇಟೆ ಕ್ಷೇತ್ರದ ವಕ್ತಾರ ಬಿ.ಎಸ್. ತಮ್ಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಮನು ಮುತ್ತಪ್ಪ ಹಾಗೂ ಅಡ್ಡಂಡ ಕಾರ್ಯಪ್ಪ ಅವರುಗಳು ಪೊನ್ನಣ್ಣ ಅವರ ಬಗ್ಗೆ ತೀರಾ ಕೀಳುಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಯ ತೇಜೋವಧೆ ಮಾಡಬಾರದು. ನಾವೆಲ್ಲರೂ ಕಾವೇರಿ ಮಣ್ಣಿನಲ್ಲೇ ಹುಟ್ಟಿದವರು. ನಾವುಗಳೂ ಹಿಂದೂಗಳೇ ನಮ್ಮಲ್ಲೂ ಹಿಂದುತ್ವ ಇದೆ. ನಾವು ಯಾರನ್ನೂ ವೈಯಕ್ತಿಕವಾಗಿ ನಿಂದನೆ ಮಾಡುತಿಲ್ಲ.
ಕೆ.ಜಿ. ಬೋಪಯ್ಯ ಅವರೂ ಕೂಡ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಆದರೆ, ಅವರ ಹಿಂಬಾಲಕರು ಈ ಕಾರ್ಯ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಸಲಹೆ ಮಾಡಿದರು. ಈ ಹಿಂದೆ ದಳದಿಂದ ತಾಲೂಕು ಪಂಚಾಯಿತಿಗೆ ಅಡ್ಡಂಡ ಕಾರ್ಯಪ್ಪ ಸ್ಪರ್ಧಿಸಿದ್ದಾಗ ಎ.ಕೆ. ಸುಬ್ಬಯ್ಯ ಅವರ ಸಹಕಾರದಿಂದ ಗೆದ್ದು ಬಂದಿದ್ದು ಇದೀಗ ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಮನು ಮುತ್ತಪ್ಪ ಅವರು ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಗೆ ಪೊನ್ನಣ್ಣ ಅವರಿಂದ ರೂ. ೩ ಲಕ್ಷ ಹಣ ಪಡೆದುಕೊಂಡಿದ್ದು, ಇದೀಗ ಅವರನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವದು ಎಷ್ಟು ಸಮಂಜಸವೆAದು ತಮ್ಮಯ್ಯ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರುಗಳಾದ ಕೇಟೋಳಿರ ಉತ್ತಪ್ಪ, ಕಲಿಯಂಡ ಕೌಶಿ ಕುಶಾಲಪ್ಪ, ಬಿದ್ದಂಡ ತೇಜಕುಮಾರ್, ಪುತ್ತರೀರ ಪಪ್ಪು ತಿಮ್ಮಯ್ಯ ಇದ್ದರು.