*ಗೋಣಿಕೊಪ್ಪ, ಮೇ ೫: ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ಶಾಸಕ ಕೆ.ಜಿ. ಬೋಪಯ್ಯ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿಗೆ ಸೇರ್ಪಡೆ ಗೊಂಡರು.
ಜೋಡುಬೀಟಿ ಸಮೀಪದಲ್ಲಿರುವ ಸ್ವಗೃಹದಲ್ಲಿ ಅವರ ಬೆಂಬಲಿಗ ರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಅವರು ಕಾಂಗ್ರೆಸ್ ಪಕ್ಷದಲ್ಲಿನ ತತ್ವ ಸಿದ್ದಾಂತದಲ್ಲಿ ಸಾಮಾಜಿಕ ಕಳಕಳಿ ಕಾಣದಿರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ದೀನ, ದಲಿತ, ಬಡವರ ಪರ ಒಲವು ಹೊಂದಿರುವ ಮತ್ತು ಹಿಂದುತ್ವದ ಬಗ್ಗೆ ಪ್ರೇರಣದಾಯಕವಾಗಿರುವ ಬಿಜೆಪಿ ಪಕ್ಷವನ್ನು ಆರಿಸಿಕೊಂಡಿರುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಡಾ. ಸುಭಾಷ್ ನಾಣಯ್ಯ, ಪ್ರಮುಖರುಗಳಾದ ಎಂ.ಎA. ರವೀಂದ್ರ, ಪಟ್ರಪಂಡ ರಘುನಾಣಯ್ಯ, ತೇಲಪಂಡ ಶಿವಕುಮಾರ್ ನಾಣಯ್ಯ, ಅಜ್ಜಿಕುಟ್ಟಿರ ಪ್ರವೀಣ್, ಚೋಡುಮಾಡ ಶ್ಯಾಮ್ ಪೂಣಚ್ಚ, ಪಿ.ಎಸ್. ಮುತ್ತ, ಮಾಪಂಗಡ ಯಮುನಾ ಚಂಗಪ್ಪ, ಕೊಡಂದೆರ ಬಾಂಡ್ ಗಣಪತಿ, ಗುಮ್ಮಟಿರ ಕಿಲನ್‌ಗಣಪತಿ, ದರ್ಶನ್ ನಂಜಪ್ಪ, ಮೂಕಳೆರ ಮಧು, ಕಾಂತÀರಾಜು ಮೊದಲಾದವರಿದ್ದರು.