ಕೂಡಿಗೆ, ಮೇ ೫: ಕುಶಾಲನಗರ ಸಮೀಪದ ಗೊಂದಿಬಸವನ ಹಳ್ಳಿಯಲ್ಲಿ ಹಾಡಹಗಲೆ ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ.

ಗ್ರಾಮದ ಕೆಂಚಪ್ಪ ಎಂಬವರು ಮನೆಯಿಂದ ಕುಶಾಲನಗರ ಪಟ್ಟಣಕ್ಕೆ ತೆರಳಿದ ಸಂದರ್ಭ ಕಳ್ಳತನ ನಡೆದಿದೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಲ್ಲಿದ್ದ ೬ ಸಾವಿರ ನಗದು, ೬೦ ಸಾವಿರ ಬೆಲೆ ಬಾಳುವ ಚಿನ್ನ ಕಳವು ಅಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಪುನೀತ್ ಕುಮಾರ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.