ಸುಂಟಿಕೊಪ್ಪ, ಮೇ ೪: ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಸಂಜೆ ಧ್ವಜಾರೋಹಣವನ್ನು ಚಿಕ್ಕಮಗಳೂರು ಧರ್ಮಕ್ಷೇತ್ರ ಗುರುಗಳಾದ ವಿನಯ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್‌ಸೆಲ್ವಕುಮಾರ್ ನೇರವೇರಿಸಿದರು.
ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚಿಕ್ಕಮಗಳೂರು ಧರ್ಮಕ್ಷೇತ್ರ ಗುರುಗಳಾದ ವಿನಯ್ ಕುಮಾರ್ ಧ್ವಜಾರೋಹಣವನ್ನು ನೇರವೇರಿಸುವ ಮೂಲಕ ವಾರ್ಷಿಕೋತ್ಸವದ ೩ ದಿನಗಳ ಕಾಲ ಆಡಂಬರ ವಿಶೇಷ ಬಲಿಪೂಜೆಗೆ ಚಾಲನೆಯನ್ನು ನೀಡಿದರು.
ಹಬ್ಬದ ಸಿದ್ಧತೆಯಾಗಿ ತಾ. ೫ ಹಾಗೂ ೬ ರಂದು ಸಂಜೆ ಬಲಿಪೂಜೆ ಹಾಗೂ ಆರಾಧನೆಯನ್ನು ಗುರುಗಳಾದ ವಿನಯ್ ಕುಮಾರ್ ಹಾಗೂ ಅರುಳ್ ಸೆಲ್ವಕುಮಾರ್ ನೆರವೇರಿಸಲಿದ್ದಾರೆ.
ತಾ. ೭ರಂದು ಸಂಜೆ ೫.೩೦ ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಗಾಯನ ಬಲಿಪೂಜೆ, ಪಾಲಕ ಸಂತ ಅಂತೋಣಿಯವರ ತೇರಿನ ಮೆರವಣಿಗೆಯ ನಂತರ ಪರಮ ಪ್ರಸಾದ ಆರಾಧನೆಯನ್ನು ಅತೀ ವಂದನೀಯ ಅಲ್ಫೆçಡ್ ಜಾನ್ ಮೆಂಡೋAಸ ಅವರು ನೇರವೇರಿಸಲಿದ್ದಾರೆ ಎಂದು ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ತಿಳಿಸಿದ್ದಾರೆ.