ಮಡಿಕೇರಿ, ಮೇ. ೪: ಸಾರ್ವಜನಿಕ ಖಜಾನೆಯಿಂದ ಸ್ವಸಹಾಯ ಗುಂಪುಗಳಿಗೆ ಹಾಗೂ ಸರಕಾರೇತರ ಸಂಸ್ಥೆಗಳಿಗೆ ಯಾವುದೇ ರೀತಿಯ ಹಣ ವರ್ಗಾವಣೆಗೆ ಜಿಲ್ಲಾ ಚುನಾವಣಾಧಿಕಾರಿ ಡಾ. ಬಿ.ಸಿ. ಸತೀಶ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ತಾ. ೭ ರಿಂದ ಮತದಾನ ಕೊನೆಗೊಳ್ಳುವ ತನಕ ನಗದು ಅಥವಾ ಚೆಕ್ ರೂಪದಲ್ಲಿ ಯಾವುದೇ ಹಣವನ್ನು ಸಂದಾಯ ಮಾಡುವಂತಿಲ್ಲ. ಹಣ ಸಂದಾಯ ಮಾಡಿದ್ದಲ್ಲಿ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.