ಮಡಿಕೇರಿ, ಮೇ ೪: ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ತಾ. ೬ ರಂದು ಬೆಳಿಗ್ಗೆ ೧೦ ಗಂಟೆಗೆ ಬಾಳೆಲೆ ಬಳಿಯ ಕಾರ್ಮಾಡು ಗ್ರಾಮದಲ್ಲಿ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಿನಿ ವಿಮಾನಗಳ ಹಾರಾಟ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ಬಾಳೆಲೆ-ಕಾರ್ಮಾಡು ಗ್ರಾಮದ ಕೊಳ್ಳಿಮಾಡ ರಾಜಿ ಗಣಪತಿ ಮತ್ತು ತಂಡದಿAದ ಗ್ರಾಮದ ಖಾಸಗಿ ಏರ್‌ಸ್ಟಿçಪ್‌ನಲ್ಲಿ ೩೦ಕ್ಕೂ ಅಧಿಕ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಕಾರ್ಯಕ್ರಮ ನಡೆಯಲಿದೆ. ಯುವ ಮತದಾರರು, ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಸದಸ್ಯರು, ಸಾರ್ವಜನಿಕರು ಈ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಿನಿ ವಿಮಾನಗಳ ಹಾರಾಟದ ಪ್ರದರ್ಶನ ವೀಕ್ಷಿಸಿ ಮತದಾನದ ಮಹತ್ವ ಮತ್ತು ಮೇ ೧೦ ರಂದು ಮತದಾನ ಮಾಡಿ ಎಂಬ ಸಂದೇಶವನ್ನು ಎಲ್ಲೆಡೆ ಸಾರುವಂತೆ ಡಾ. ಆಕಾಶ್ ಕೋರಿದ್ದಾರೆ.