ಮಡಿಕೇರಿ, ಮೇ ೪: ಬ್ರೆöÊನೋಬ್ರೆöÊನ್ ಇಂಟರ್ನ್ಯಾಷನಲ್ ವತಿಯಿಂದ ಇತ್ತೀಚೆಗೆ ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ೪೧ನೇ ರಾಷ್ಟçಮಟ್ಟದ ಅಬಾಕಸ್ ಸ್ಪರ್ಧೆ-೨೦೨೩ರಲ್ಲಿ ಮಡಿಕೇರಿ ಕೇಂದ್ರದಿAದ ನುಷ್ಕ ಕೊಡಂದೆರ ಮತ್ತು ತ್ರಿಶಾ ಎ.ವೈ. ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಬ್ರೆöÊನೋಬ್ರೆöÊನ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್ ಹಾಗೂ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್ ವಿಜೇತರಿಗೆ ಪದಕ ಪ್ರದಾನ ಮಾಡಿದರು.ಮಡಿಕೇರಿ ಬ್ರೆöÊನೋಬ್ರೆöÊನ್ ಕೇಂದ್ರದ ಮುಖ್ಯಸ್ಥರು ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
೫ ವರ್ಷ ವಯಸ್ಸಿನ ನುಷ್ಕ ಕೊಡಂದೆರ ಮಡಿಕೇರಿಯ ಕೊಡಂದೆರ ಕಾವ್ಯ ಮತ್ತು ವಿಕ್ರಮ್ ಕುಟ್ಟಯ್ಯ ದಂಪತಿ ಪುತ್ರಿ. ತ್ರಿಶಾ ಎ.ವೈ. ಮಡಿಕೇರಿಯ ಸಿಐಡಿ ಅರಣ್ಯ ಸಂಚಾರ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೇಶ್ ಎ.ಜಿ. ಮತ್ತು ಭವಿತ ಕೆ.ಜಿ. ದಂಪತಿ ಪುತ್ರಿ.