ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮೇ ೪: ಸುಳ್ಯದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬAಧಿಸಿದAತೆ ಇಬ್ಬರು ನಿಷೇಧಿತ ಪಿಎಫ್‌ಐ ಕಾರ್ಯಕರ್ತರ ವಿರುದ್ಧ ರಾಷ್ಟಿçÃಯ ತನಿಖಾ ದಳ (ಓIಂ) ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ತಾ. ೨ರಂದು ಎನ್‌ಐಎ ತನಿಖಾಧಿಕಾರಿಗಳು ಇತ್ತೀಚೆಗೆ ಬಂಧಿಸಲ್ಪಟ್ಟ ಮಡಿಕೇರಿ ಮೂಲದ ಎಂ.ಹೆಚ್. ತುಫೈಲ್ ಮತ್ತು ಕೇರಳದ ಮಹಮದ್ ಜುಬೇರ್ ಎಂಬ ಆರೋಪಿಗಳ ವಿರುದ್ಧ ಚಾರ್ಜ್ಶೀಟ್‌ನ್ನು ಬೆಂಗಳೂರಿನ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಳೆದ ವರ್ಷದ ಜುಲೈ ೨೬ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮತ್ತು ಇತರ ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸುವ ನಿಷೇಧಿತ ಪಿಎಫ್‌ಐನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರನ್ನು ಮಾರಕಾಸ್ತçದಿಂದ ಹತ್ಯೆ ಮಾಡಲಾಗಿತ್ತು ಎಂದು ತನಿಖೆಯಿಂದ ನೈಜಾಂಶ ಹೊರಬಿದ್ದಿತ್ತು ಪ್ರವೀಣ್ ಅವರ ಮೇಲೆ ಆರೋಪಿಗಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಬದಲಾಗಿ ತಮ್ಮ ಕಾರ್ಯಸೂಚಿಯ ಅನುಷ್ಠಾನದ ಭಾಗವಾಗಿ ಈ ಹತ್ಯೆ ನಡೆಸಲಾಗಿತ್ತು. ಈ ಕೊಲೆಯಲ್ಲಿ ಒಟ್ಟು ೨೧ ಆರೋಪಿಗಳು ಭಾಗಿಯಾಗಿದ್ದು ಎಲ್ಲರ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಮಡಿಕೇರಿ ಮೂಲದ ಪಿಎಫ್‌ಐ ಸಂಘಟನೆಯ ಕೊಡಗು ಜಿಲ್ಲಾ ಮಾಜಿ ಕಾರ್ಯದರ್ಶಿ ಆಗಿದ್ದ ತುಫೈಲ್ ಕೊಲೆಯ ನಂತರ ತಲೆ ಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಸುಳಿವು ನೀಡುವವರಿಗೆ ಎನ್‌ಐಎ ಐದು ಲಕ್ಷ ರೂಪಾಯಿಗಳ ಬಹುಮಾನವನ್ನೂ ಘೋಷಿಸಿತ್ತು. ಈತನ ಸಂಪರ್ಕಗಳ ಬಗ್ಗೆ ತೀವ್ರ ನಿಗಾ ಇರಿಸಿದ್ದ ಎನ್‌ಐಎ ಮಾರ್ಚ್ ೫ ರಂದು ಬೆಂಗಳೂರಿನ ಅಮೃತಹಳ್ಳಿಯಲ್ಲಿ ತುಫೈಲ್‌ನನ್ನು ಬಂಧಿಸಿತ್ತು.

ಪಿಎಫ್‌ಐ ‘ಹಿಟ್ ಸ್ಕಾ÷್ವಡ್’ನಲ್ಲಿ ತುಫೈಲ್ ‘ಮಾಸ್ಟರ್ ಟ್ರೆöÊನರ್’ ಆಗಿದ್ದ ಎಂದು ಚಾರ್ಚ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಬಂಧಿತ ತುಫೈಲ್ ಇತರ ಸಮುದಾಯದ ಮುಖಂಡರನ್ನು ಗುರುತಿಸಿ ಹತ್ಯೆ ಮಾಡಲು ರಚಿಸಿಕೊಂಡಿದ್ದ ‘ಹಿಟ್ ಸ್ಕಾ÷್ವಡ್’ನ ಕರ್ನಾಟಕ ರಾಜ್ಯದ ಮುಖ್ಯಸ್ಥನಾಗಿದ್ದ ಎಂದು ಈ ಹಿಂದೆ ಬೆಳಕಿಗೆ ಬಂದಿತ್ತು.