ಸೋಮವಾರಪೇಟೆ, ಮೇ ೪: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವದ ಜಾಗೃತಿಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿರುವ ಭಜರಂಗ ದಳವನ್ನು ನಿಷೇಧಿಸುವ ಭರವಸೆ ನೀಡಿದ್ದು, ಈ ಚುನಾವಣೆಯಲ್ಲಿ ಹಿಂದೂ ಸಮಾಜವೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ ಎಂದು ಭಜರಂಗದಳದ ತಾಲೂಕು ಸಂಚಾಲಕ ನೇಗಳ್ಳೆ ಜೀವನ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಹೋರಾಟ ಆರಂಭವಾದ ಸಮಯದಲ್ಲಿ ಉದಯಿಸಿದ ಭಜರಂಗದಳವು ಸೇವಾ ಸುರಕ್ಷಾ ಸಂಸ್ಕಾರದ ಧ್ಯೇಯದೊಂದಿಗೆ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ೬೮ ಸಾವಿರ ಗ್ರಾಮಗಳಲ್ಲಿ ಭಜರಂಗದಳದ ಕಾರ್ಯಕರ್ತ ರಿದ್ದಾರೆ. ಇಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಆ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದರು.
ಭಜರAಗದಳವು ಯಾವುದೇ ದೇಶದ್ರೋಹದಂತಹ ಕೆಲಸಕ್ಕೆ ಕೈ ಹಾಕಿಲ್ಲ. ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುತ್ತಿದೆ. ಲವ್ ಜಿಹಾದ್, ಮತಾಂತರ, ಗೋಹತ್ಯೆ ಯಂತಹ ಕೃತ್ಯಗಳನ್ನು ತಡೆಯುತ್ತಿದೆ. ಇಂತಹ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ಹರಿಸಿದೆ. ಇದಕ್ಕೆ ತಾ. ೧೦ ರಂದು ಹಿಂದೂ ಸಮಾಜ ಉತ್ತರ ನೀಡಬೇಕಿದೆ ಎಂದರು.
ಕೊಡಗಿನಲ್ಲಿ ಭೂ ಕುಸಿತ, ಕೊರೊನಾ ಸಂದರ್ಭ ಭಜರಂಗ ದಳದ ಸೇವೆಯನ್ನು ಜನತೆ ಗಮನಿ ಸಿದ್ದಾರೆ. ಸಂಘಟನೆಯ ಕಾರ್ಯ ಕರ್ತರು ಮನೆ ಮಠ ಬಿಟ್ಟು ಸಮಾಜದ ಸೇವೆ ಮಾಡಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಸAಸ್ಕಾರ ನಡೆಸಲಾಗಿದೆ. ಈ ನಡುವೆ ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಮಟ್ಟಕ್ಕೆ ಇಳಿದಿರುವುದು ಸರಿಯೋ ತಪ್ಪೋ ಎಂಬ ನಿರ್ಧಾರವನ್ನು ಮತದಾರರು ಮಾಡಲಿದ್ದಾರೆ ಎಂದು ಅಭಿಪ್ರಾಯಿಸಿದರು.
ಹಿಜಾಬ್ ವಿವಾದ, ಟಿಪ್ಪು ಜಯಂತಿಯ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವ ಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿತ್ತು ಎಂದ ಅವರು, ಹಿಂದೂಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಭಜರಂಗದಳವನ್ನು ನಿಷೇಧಿಸುವ ಮೊದಲೇ ಕಾಂಗ್ರೆಸ್ ಕುಸಿಯಲಿದೆ. ಹಿಂದುತ್ವದ ರಕ್ಷಣೆಗೆ ಬದ್ಧವಾಗಿರುವ ಪಕ್ಷಕ್ಕೆ ಸಂಘಟನೆ ಬೆಂಬಲಿಸಲಿದೆ. ಕಾಂಗ್ರೆಸ್‌ನ ಇಂತಹ ಓಲೈಕೆಗೆ ತಾ. ೧೦ ರಂದು ಉತ್ತರ ನೀಡಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಭಜರಂಗ ದಳದ ಕೆ.ಟಿ. ಮಧು, ಟಿ.ಎಸ್. ನಿಧಿ ಅವರುಗಳು ಉಪಸ್ಥಿತರಿದ್ದರು.