ಸೋಮವಾರಪೇಟೆ, ಮೇ ೪: ನಮೂನೆ ೧೨ರಲ್ಲಿ ಹೆಸರು ನೋಂದಾಯಿಸಿಕೊAಡಿದ್ದ ಮತದಾರರಿಗೆ, ಮತದಾನಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ವಿಶೇಷಚೇತನರು ಮತ್ತು ೮೦ ವರ್ಷ ಮೇಲ್ಪಟ್ಟ ಹಿರಿಯರು ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.
ಸೋಮವಾರಪೇಟೆ ಸೆಕ್ಟರ್ ೪ರ ವ್ಯಾಪ್ತಿಯಲ್ಲಿ ನೋಂದಾಯಿಸಿಕೊAಡಿದ್ದ ವಿಶೇಷಚೇತನರು, ಹಿರಿಯರು ಸೇರಿದಂತೆ ಒಟ್ಟು ೩೭ ಜನರು ತಮ್ಮ ಮತವನ್ನು ಗೌಪ್ಯವಾಗಿ ಚಲಾಯಿಸಿದರು.
ಈ ಸಂದರ್ಭ ತಹಶೀಲ್ದಾರ್ ಎಸ್.ಎನ್. ನರಗುಂದ, ಸೆಕ್ಟರ್ ಅಧಿಕಾರಿ ಪಿ.ಕೆ. ನಾಚಪ್ಪ, ಪೋಲಿಂಗ್ ಅಧಿಕಾರಿಗಳಾದ ಶ್ರೀನಿವಾಸ್ ಮತ್ತು ನಟರಾಜ್, ಪೊಲೀಸ್ ಮುಖ್ಯ ಪೇದೆ ಉಮೇಶ್, ಗ್ರಾಮ ಲೆಕ್ಕಿಗರಾದ ಶ್ವೇತ ಮತ್ತು ಚರಣ್ ಮತ್ತಿತರರು ಇದ್ದರು. ಮುಳ್ಳುಸೋಗೆಯಲ್ಲಿ
ಕೂಡಿಗೆ: ಕುಶಾಲನಗರ ಪುರಸಭೆಯ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದಲ್ಲಿ ನಮೂನೆ ೧೨ರ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು.
ಚುನಾವಣೆ ಬೂತ್ಗಳಿಗೆ ತೆರಳಲು ಸಾಧ್ಯವಾಗದವರಿಗೆ ಮನೆಯಿಂದಲೆ ಅಂಚೆ ಮೂಲಕ ಮತದಾನಕ್ಕೆ ೩೮ ಮಂದಿ ಕೋರಿದ್ದರು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಆಯಾ ಮತದಾರರ ಮನೆಗಳಿಗೆ ತೆರಳಿ ನಿಯಮಾನುಸಾರ ಅಗತ್ಯ ಪ್ರಕ್ರಿಯೆಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿ ಮತದಾನ ಮಾಡಿಸಿದರು.
ಸೆಕ್ಟರ್ ಅಧಿಕಾರಿ ಶಿವಪ್ಪನಾಯಕ್, ಪೋಲಿಂಗ್ ಅಧಿಕಾರಿಗಳಾದ ಮಾಚಯ್ಯ, ಶಫೀಕ್, ಮೈಕ್ರೋ ಅಬ್ಸರ್ವರ್ ಪ್ರವೀಣ್, ಬಿಎಲ್ಓ ಲಕ್ಷಿö್ಮ ಇದ್ದರು.