ಶನಿವಾರಸಂತೆ, ಮೇ ೪: ಪಟ್ಟಣ ವ್ಯಾಪ್ತಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬೆಂಬಲಿಗರ ಜೊತೆ ಮತಯಾಚನೆ ಮಾಡಿದರು.

ಪಟ್ಟಣದ ಅಂಗಡಿ-ಮುAಗಟ್ಟು, ಹೊಟೇಲ್, ಸಂಘ-ಸAಸ್ಥೆಗಳು ಹಾಗೂ ಮನೆಮನೆಗೆ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುತ್ತಾ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ನಗರ ಬಿಜೆಪಿ ಅಧ್ಯಕ್ಷ ಯತೀಶ್, ಮುಖಂಡರಾದ ಎಸ್.ಎನ್. ರಘು, ಭುವನೇಶ್ವರಿ, ಹರೀಶ್ ಕುಮಾರ್, ಯೋಗಾನಂದ್, ಅಚ್ಚುತ, ಶ್ರೀನಿಧಿ, ಪ್ರಸನ್ನ, ಜಯಪ್ಪ, ತನ್ಮಯ್ ಇತರರು ಇದ್ದರು.