ಬುದ್ಧನ ಬೋಧನೆಗಳಲ್ಲಿ ಬಹುಪಾಲು ಜನಸಾಮಾನ್ಯರನ್ನು ಉದ್ದೇಶಿಸಿವೆ. ಮಹಾಮಂಗಳ ಸ್ತುತಂನಲ್ಲಿ ಯಾರ ಬಗೆಯ ಜೀವನ ವಿಧಾನ ಪಾಲಿಸಬೇಕೆಂದು ಬುದ್ಧ ವಿವರಿಸಿರುವನು. ಮೂರ್ಖರೊಡನೆ ಸಹವಾಸ ಬೇಡ. ಗೌರವಿಸ ಬೇಕಾದವರಿಗೆ ಗೌರವ ನೀಡು ಎನ್ನುವ ಬುದ್ಧ. ಆಶಾವಾದ ಮನುಷ್ಯನಲ್ಲಿ ಮುಖ್ಯ. ನಿರಾಶವಾದವಿರಬಾರದು ಎಂದು ತಜ್ಞರು ಹೇಳಿದ್ದನ್ನು ಆಶಾವಾದವೂ ಬೇಡ ನಿರಾಶವಾದವೂ ಬೇಡ ವಾಸ್ತವಿಕವಾದವಿರಲಿ ಎನ್ನುವನು. ಜೀವನದಲ್ಲಿ ಆಹಾರದ ಪಾತ್ರ ರುಚಿಗೆ ಮಾತ್ರ. ಉಡುಪಿನಲ್ಲಿ ಆಡಂಬರ ಬೇಡ. ಸಮಾಜದ ಅಶಾಂತಿಗೆ ಬಡತನವೇ ಮೂಲ. ದುಃಖವೇ ಸಕಲ ಸಮಸ್ಯೆಗೆ ಕಾರಣವೆಂದು. ಆಸೆಯೇ ದುಃಖಕ್ಕೆ ಮೂಲವೆಂದ. ಮದ್ಯಪಾನ, ಜೂಜಾಟ, ಕೆಟ್ಟ ಸಾಂಗತ್ಯ, ಸೋಮಾರಿತನ ಇವು ದಾರಿದ್ರö್ಯಕ್ಕೆ ಕಾರಣವೆಂದ.

ಯಾವ ಜೀವಿಯನ್ನೂ ನೋಯಿಸದೆ ಸಮವಾಗಿ ಕಾಣಿರಿ. ಪ್ರೇಮಿಸಿ, ಗೌರವಿಸಿ ಎಂದು ಬುದ್ಧನು ಸಲಹೆ ನೀಡಿದನು. ಅಹಿಂಸೆಯೇ ಶಾಂತಿಗೆ ಮೂಲವೆಂದ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದ. ಇದು ಬೌದ್ಧರ ಪವಿತ್ರ ಸ್ಥಳ. ಇಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವರು. ಬೌದ್ಧ ಧರ್ಮ ಎಂದರೆ ಮಾನವ ಧರ್ಮ. ಕೆಳಗೆ ಬಿದ್ದವರನ್ನು ಎಬ್ಬಿಸಿದವನೇ ಬೌದ್ಧ ಧರ್ಮ ಹೊಂದಿದವನು. ಮನುಷ್ಯ ಸಮತೋಲನದಿಂದ ಜೀವನ ಸಾಗಿಸಿ ಸಂಸಾರದಿAದ ಮಹಾ ನಿರ್ಮಾಣ ಪಥಕ್ಕೆ ಸೇರಿಕೊಳ್ಳುವುದೇ ಬೌದ್ಧ ಧರ್ಮದ ಮಾರ್ಗ. ಮನುಜರಲ್ಲಿ ಅಹಂ ಸ್ವಭಾವ, ಮೇಲು-ಕೀಳೆಂಬ ತಾರತಮ್ಯದಿಂದ ಶಾಂತಿ ಕದಡಿದೆ. ಇದಕ್ಕೆ ಪರಿಹಾರವಾಗಿ ಬುದ್ಧ ನಾಲ್ಕು ಸತ್ಯಗಳು, ಎಂಟು ಸೂತ್ರಗಳು ಪ್ರಪಂಚಕ್ಕೆ ಶಾಂತಿ ಮಾರ್ಗ ಸೂಚಿಸುತ್ತವೆಂದ. ಹಿಂದಿನ ಕರ್ಮಗಳೆ ಇಂದಿನ ಸಮಸ್ಯೆಗೆ ಕಾರಣವೆಂದೂ ಹೇಗೆ ಜೀವಿಸಬೇಕು. ಏನು ಮಾಡಬೇಕೆಂದು ಸೂಚಿಸಿದನು. ಶಾಶ್ವತವಲ್ಲದ ಸುಖ-ಸಂಪತ್ತು, ನಶಿಸಿ ಹೋಗುವ ದೇಹ ಇವು ಸಿದ್ಧಾರ್ಥನ ಸತ್ಯಾನ್ವೇಷಣೆಗೆ ಪ್ರೋತ್ಸಾಹ ನೀಡಿದವು. ಇದನ್ನು ಗ್ರಹಿಸಿದ ಸಿದ್ಧಾರ್ಥ ಸುದೀರ್ಘ ತಪಸ್ಸು ಮಾಡಿ, ಬೋದಿ ವೃಕ್ಷದ ನೆರಳಲ್ಲಿ ಹುಣ್ಣಿಮೆ ಬೆಳದಿಂಗಳ ಬೆಳಕಲ್ಲಿ ಬುದ್ಧನ ಜ್ಞಾನ ಪರಿಪೂರ್ಣಗೊಂಡಿತು.

ಆತನಿಗೆ ಆಶ್ರಯ ನೀಡಿದ ಬೋದಿ ವೃಕ್ಷ ಸತ್ಯ, ಶಾಂತಿ, ದಯೆ, ಧ್ಯಾನ, ಬೌದ್ಧ ಧರ್ಮದ ಮುಖ್ಯಾಂಶಗಳು. ಶರಣಂ ಎಂದರೆ ಆಶ್ರಯಿಸುವುದೆಂದರ್ಥ. ಬುದ್ಧನು ತನ್ನ ಧರ್ಮ ಸೂತ್ರಗಳನ್ನು ದೀನರಿಗೆ, ಚಕ್ರವರ್ತಿಗಳಿಗೆ ಸಮಾನವಾಗಿ ಬೋಧಿಸಿದ. ಇದು ವಿಶ್ವದಾದ್ಯಂತ ವಿಸ್ತರಿಸಿತು. ಬುದ್ಧನಿಗೆ ಬೋದಿ ವೃಕ್ಷದ ಕೆಳಗೆ ಜ್ಞಾನೋದಯವಾಗಿ ಅಷ್ಟಾಂಗ ಮಾರ್ಗ ಅನುಸರಿಸಿದ. ಅದೇ ಬುದ್ಧಗಯ ವಿಶ್ವವಿಖ್ಯಾತ ಪುಣ್ಯ ಕ್ಷೇತ್ರ. ಬುದ್ಧಗಯ, ಸಾರನಾಥ್, ಕುಶಿನಗರ, ಲುಂಬಿನಿ ಈ ನಾಲ್ಕು ಬುದ್ಧ ಜೀವಿಸಿದ ಸ್ಥಳ. ಇವೆಲ್ಲವೂ ಬೌದ್ಧ ಧರ್ಮಿಯರಿಗೆ ಪವಿತ್ರ ಸ್ಥಳ. ಗಯಾ ಬುದ್ಧ ದೇವನಿಗೆ ಜ್ಞಾನೋದಯ ಸ್ಥಳವಾದರಿಂದ ಅದು ಬುದ್ಧಗಯ ಆಗಿದೆ. ಬೌದ್ಧರು ಆ ಸ್ಥಳವನ್ನು ಜ್ಞಾನ ಹೆಚ್ಚಿಸಿಕೊಳ್ಳುವ ಸ್ಥಳವೆಂದು ಭಾವಿಸಿದರು. ಗಯ ಎನ್ನುವುದು ಇದು ಬಿಹಾರದ ಗಯಾ ಜಿಲ್ಲೆಯಲ್ಲಿದೆ.

ಮೌರ್ಯರು ಪಾಟಲಿಪುತ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಇವರ ಆಡಳಿತಾವಧಿಯಲ್ಲಿ ನಳಂದ ವಿಶ್ವವಿದ್ಯಾಲಯ ಜನರನ್ನು ಜ್ಞಾನವಂತರನ್ನಾಗಿ ಮಾಡುವುದರಲ್ಲಿ ಮುಂದಿತ್ತು. ಇಲ್ಲಿರುವ ವಿಹಾರಗಳಲ್ಲಿ ಅನೇಕ ಮಂದಿ ಬೌದ್ಧ ಸನ್ಯಾಸಿಗಳು ಅಧ್ಯಾಪಕರಿರುವರು. ಬಿಹಾರ್ ಎಂಬ ಹೆಸರು ವಿಹಾರ್‌ನಿಂದ ಬಂದುದಾಗಿದೆ. ಗಯಾದ ಬೋದ್‌ಗಯ ಇಲ್ಲಿ ಗೌತಮ ಬುದ್ಧನ ಆಲಯವಿದೆ. ಇಲ್ಲಿ ಪ್ರಾಣಿ ಹಿಂಸೆ ನಿಷಿದ್ಧ. ವಿಷ್ಣುವಿನ ಅವತಾರಗಳಲ್ಲಿ ಬುದ್ಧ ಸಹ ಒಬ್ಬರೆಂದು ಹೇಳುವರು. ದೇಶ-ವಿದೇಶಗಳಿಂದಲೂ ಬೌದ್ಧ ಸನ್ಯಾಸಿಗಳು ಇಲ್ಲಿಗೆ ಆಗಮಿಸುವರು.

- ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ, ಟಿ. ಶೆಟ್ಟಿಗೇರಿ.