ವೀರಾಜಪೇಟೆ, ಮೇ ೩: ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಪ್ರಮುಖ ಅಂಶಗಳಾದ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಉತ್ತೇಜನದೊಂದಿಗೆ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಎನ್.ಸಿ.ಪಿ. (ರಾಷ್ಟಿçÃಯವಾದಿ ಕಾಂಗ್ರೆಸ್ ಪಕ್ಷ) ಅಭ್ಯರ್ಥಿ ಡಾ.ಎಸ್.ವೈ.ಎಂ. ಮಸೂದ್ ಫೌಜುದಾರ್ ಹೇಳಿದರು.

ನಗರದ ಎಫ್.ಎಂ.ಸಿ ರಸ್ತೆಯ ಖಾಸಗಿ ಕಟ್ಟಡದಲ್ಲಿ ಪಕ್ಷದ ಕಛೇರಿ ಉದ್ಘಾಟನೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆ ಮತ್ತು ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಈ ಬಗ್ಗೆ ತಾನು ಗಮನ ಹರಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ತನ್ವೀರ್ ಬಳ್ಳಾರಿ, ರೋಷನ್ ಗಾಂಧಿನಗರ, ಪಕ್ಷದ ಪ್ರಮುಖರಾದ ರಶೀದ್ ಸಿ.ಪಿ., ಜಾವೀದ್, ಅಸೀಫ್ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.