ಸೋಮವಾರಪೇಟೆ, ಮೇ ೩: ವಿಧಾನ ಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ಈ ಸಮಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ಪಕ್ಷಾಂತರ ಪರ್ವ ಜೋರಾಗಿದೆ. ಮೂರೂ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿಯೇ ಹೆಚ್ಚು ಪಕ್ಷಾಂತರ ನಡೆದಿದೆ.

ಈ ನಡುವೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳಿಗೆ ಅನೇಕ ಪುಷ್ಠಿ ದೊರೆತಿದೆ.

ಒಕ್ಕಲಿಗ ಸಮುದಾಯದ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿ ಕೊಂಡಿರುವ ಜೀವಿಜಯ ಅವರಿಗೆ ಒಕ್ಕಲಿಗರು ಮಾತ್ರವಲ್ಲ; ಇತರ ಸಮುದಾಯದಲ್ಲೂ ಬೆಂಬಲಿಗ ರಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಜೀವಿಜಯ ಅವರು ಕಾಂಗ್ರೆಸ್‌ನಿAದ ಟಿಕೆಟ್ ವಂಚಿತರಾಗಿದ್ದು, ತಮ್ಮ ಅಸಮಾಧಾನವನ್ನು ಈಗಾಗಲೇ ಹೊರಹಾಕಿದ್ದಾರೆ.

ಜೀವಿಜಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅನೇಕ ಮಂದಿ ಈಗಾಗಲೇ ಬಿಜೆಪಿ ಶಾಲು ತೊಟ್ಟು ಪ್ರಚಾರದ ‘ಫೀಲ್ಡ್’ಗಿಳಿದಿದ್ದಾರೆ. ಕೆಲವರು ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮನೆಯಲ್ಲಿ ಪಕ್ಷ ಸೇರ್ಪಡೆಯಾಗಿದ್ದರೆ, ಇನ್ನೊಂದಿಷ್ಟು ಮಂದಿ ಬಹಿರಂಗ ಸಭೆಗಳಲ್ಲಿ ಸೇರ್ಪಡೆಯಾಗುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಿಳಿಗೇರಿ ಗ್ರಾಮದ ಕೈಮಡದಲ್ಲಿ ನಡೆದ ಕೋಲ ಉತ್ಸವವೊಂದರಲ್ಲಿ ಜೀವಿಜಯ ಹಾಗೂ ರಂಜನ್ ಮುಖಾಮುಖಿಯಾಗಿದ್ದು, ಇಬ್ಬರು ನಾಯಕರೂ ಕೆಲ ಹೊತ್ತು ರಾಜಕೀಯದ ಚರ್ಚೆ ನಡೆಸಿದ್ದಾರೆ.

ಪಿಸು ಮಾತುಗಳಲ್ಲಿ ನಡೆದ ಮಾತುಕತೆಯ ಫಲಿತಾಂಶವೇ ಜೀವಿಜಯ ಅವರ ಬೆಂಬಲಿಗರು ಬಿಜೆಪಿಯತ್ತ ವಾಲುತ್ತಿರುವುದಾಗಿದೆ. ಬಿಜೆಪಿಯನ್ನು ಒಪ್ಪದ ಕೆಲ ಕಾರ್ಯಕರ್ತರು ಹಾಗೂ ಮುಖಂಡರಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸುವAತೆ ಜೀವಿಜಯ ನಿರ್ದೇಶನ ನೀಡಿದ್ದಾರೆ.

ಇನ್ನು ಕೆಲವರಿಗೆ ರಂಜನ್ ಅವರನ್ನು ಬೆಂಬಲಿಸುವAತೆ ಸೂಚಿಸಿದ್ದು, ಅದರಂತೆ ಕಾರ್ಯಕರ್ತರು ಮುಂದುವರೆಯು ತ್ತಿದ್ದಾರೆ. ಇನ್ನು ಕೆಲವರು ಬಹಿರಂಗವಾಗಿ ಪಕ್ಷ ಸೇರ್ಪಡೆ ಗೊಳ್ಳದೇ ಬಿಜೆಪಿ ಬೆಂಬಲಿಸುವ ಬಗ್ಗೆ ತಮ್ಮ ನಾಯಕರಿಗೆ ಭರವಸೆ ನೀಡಿದ್ದಾರೆ. ಜೀವಿಜಯ ಅವರೊಂದಿಗೆ ಈ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಒಂದಿಷ್ಟು ನಾಯಕರು ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದಾರೆ.