ಪೊನ್ನಂಪೇಟೆ, ಮೇ ೩: ತಾ. ೪ ರಿಂದ ೧೪ ರವರೆಗೆ ಒಡಿಸ್ಸಾದಲ್ಲಿ ನಡೆಯಲಿರುವ ರಾಷ್ಟಿçÃಯ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ಚೆಪ್ಪುಡಿರ ಮನಿಷಾ ಪೊನ್ನಮ್ಮ ಆಯ್ಕೆಯಾಗಿದ್ದಾರೆ.

ಈಕೆ ಮಡಿಕೇರಿ ಸಾಯಿ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಚೆಪ್ಪುಡಿರ ದಿಲೀಪ್ ಕುಮಾರ್ ಮತ್ತು ಭವಾನಿ ದಂಪತಿ ಪುತ್ರಿ.