ಭಾಗಮಂಡಲ, ಮೇ ೩: ಸಮೀಪದ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ತಾ. ೫ ರಂದು ಶುಕ್ರವಾರ ನಡೆಯಲಿದೆ.
ಸಂಪ್ರದಾಯದAತೆ ವರ್ಷಂಪ್ರತಿ ನಡೆದು ಬರುವ ಮಹಿಷ ಮರ್ದಿನಿಯ ವಾರ್ಷಿಕ ಉತ್ಸವದ ಅಂಗವಾಗಿ ತಾ. ೩ ಮತ್ತು ೪ ರಂದು ದೇವನ ದೇವರ ದರ್ಶನ ನೃತ್ಯಬಲಿ. ಗುರುವಾರ ೩ ಗಂಟೆಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಿಂದ ಭಂಡಾರ ತರುವುದು, ರಾತ್ರಿ ವಸಂತೋತ್ಸವ ನಡೆಯಲಿದೆ. ತಾ. ೫ ರಂದು ಪಟ್ಟಣಿ ಹಬ್ಬ, ಬೆಳಿಗ್ಗೆ ದೇವರ ನೃತ್ಯ ಬಲಿ, ನೆರಪಿನ ಉತ್ಸವ ಕಾಣಿಕೆ ನಡೆಯಲಿದೆ. ಮಧ್ಯಾಹ್ನ ೩ ಗಂಟೆಯಿAದ ದೇವರ ನೃತ್ಯ ಬಲಿ, ಎತ್ತು ಹೋರಾಟ, ಬೇಡುಕೋಲ ನಡೆಯಲಿದೆ. ರಾತ್ರಿ ೭ಕ್ಕೆ ಶಯನೋತ್ಸವ ನಡೆಯಲಿದೆ.
ತಾ. ೬ ರಂದು ಮಧ್ಯಾಹ್ನ ೩ ಗಂಟೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ದೇವರ ಅವಭೃತ ಸ್ನಾನ ನಡೆಯಲಿದೆ. ರಾತ್ರಿ ತ್ರಿವೇಣಿ ಸಂಗಮದಲ್ಲಿ ಅವಭೃತ ಸ್ನಾನ ಪೂಜೆ, ಭಗಂಡೇಶ್ವರ ದೇವಾಲಯದಲ್ಲಿ ದರ್ಶನ ನೃತ್ಯ ಬಲಿ, ಕಾಣಿಕೆ ಪ್ರಸಾದ ವಿತರಣೆ, ವಸಂತ ಪೂಜೆ ನಡೆಯಲಿದೆ. ಬಳಿಕ ತಾವೂರು ದೇವಸ್ಥಾನದಲ್ಲಿ ದರ್ಶನ ನೃತ್ಯ ಬಲಿ ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ. ಕಲಶ ಕಲಶಾಭಿಷೇಕ ಮಂತ್ರಾಕ್ಷತೆ ದೈವಗಳಿಗೆ ತಂಬುಲ ಸೇವೆ ನಡೆಯಲಿದೆ. ತಾ. ೯ ರಂದು ಚಾಮುಂಡಿ ಮೇಲೇರಿಯೊಂದಿಗೆ ಉತ್ಸವ ಕೊನೆಗೊಳ್ಳಲಿದೆ.