ಮಡಿಕೇರಿ, ಮೇ ೩: ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿ ಸರ್ಕಾರ ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು, ಇಂದು ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಸರ್ಕಾರ ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಹೇಳಿದರು.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನವ ಭಾರತದಲ್ಲಿ ಮಹಿಳೆಯರು ಈಗ ರಾಷ್ಟç ನಿರ್ಮಾತೃಗಳಾಗಿದ್ದಾರೆ. ಭವಿಷ್ಯದ ಸಮಾಜಕ್ಕಾಗಿ ಮಹಿಳೆಯರು ಅಭಿವೃದ್ಧಿ ಪರ ಮತ್ತು ನಿರ್ಧಾರದ ಕೇಂದ್ರವಾಗಿದ್ದಾರೆ. ಜಾತಿ ಮತ್ತು ಧರ್ಮಗಳನ್ನು ಮೀರಿ ಮಹಿಳೆಯರು ಬಿಜೆಪಿ ಹಿಂದೆ ಸಜ್ಜುಗೊಂಡಿದ್ದು, ಸಮಾಜ ಕಲ್ಯಾಣ ಮಾದರಿ ಯಶಸ್ಸನ್ನು ತೋರಿಸುತ್ತಿದೆ. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಸೇನೆ, ಏರ್ಫೋರ್ಸ್, ರಾಜಕೀಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ಜಿಲ್ಲಾ ಉಸ್ತುವಾರಿ ಉಷಾ ದೇವಮ್ಮ, ಮಡಿಕೇರಿ ನಗರಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ಗ್ರಾಮಾಂತರ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಸೋಮವಾರಪೇಟೆ ಗ್ರಾಮಾಂತರ ಅಧ್ಯಕ್ಷೆ ಮಂಜುಳ ಸುಬ್ರಮಣಿ, ಉಪಾಧ್ಯಕ್ಷೆ ಭಾನುಮತಿ ಹಾಜರಿದ್ದರು.