ಮಡಿಕೇರಿ, ಮೇ ೩: ಗರ್ವಾಲೆ ಗ್ರಾ.ಪಂ.ಗೆ ಸೇರಿದ ಸೂರ್ಲಬ್ಬಿಯಂತಹ ಪ್ರದೇಶದ ಗ್ರಾಮೀಣ ಭಾಗದ ನಿವಾಸಿ ತಾನಾಗಿದ್ದು, ಪ್ರಸ್ತುತ ನೆಲೆಸಿರುವ ಸಿದ್ಧಲಿಂಗಪುರವೂ ಗ್ರಾಮೀಣ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜನತೆಯ ಸಮಸ್ಯೆಗಳೇನು - ಮೂಲಭೂತ ವ್ಯವಸ್ಥೆಗಳು ಏನಾಗಬೇಕಿದೆ ಎಂಬ ಅರಿವು ತನಗಿದ್ದು, ಇದರ ನಿವಾರಣೆಗೆ ಕೆಲಸ ನಿರ್ವಹಿಸುವ ಚಿಂತನೆ ತನ್ನದಾಗಿದೆ ಎಂದು ಮಡಿಕೇರಿ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ನಾಪಂಡ ಎಂ. ಮುತ್ತಪ್ಪ ಅವರು ಹೇಳಿದರು. ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಳು ಈಗಲೂ ಮುಂದುವರಿದಿರುವುದನ್ನು ಕ್ಷೇತ್ರದ ನಗರ ಪ್ರದೇಶಗಳ ಸ್ಥಿತಿಯನ್ನು ಅವಲೋಕಿಸಿದರೆ ಅರಿವಾಗುತ್ತದೆ... ಹೀಗಿರುವಾಗ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳುವುದು... ಈ ನಿಟ್ಟಿನಲ್ಲಿ ಜನರ ಅಗತ್ಯತೆಗೆ ಸ್ಪಂದಿಸಿ ದುಡಿಯುವುದು ತಮ್ಮ ಗುರಿ ಎಂದರು. ಕ್ಷೇತ್ರದಲ್ಲಿ ಪ್ರಸ್ತುತ ಜನರು ಬದಲಾವಣೆ ಬಯಸಿದ್ದು, ಪೂರಕ ವಾತಾವರಣ ಇದೆ. ತ್ರಿಕೋನ ಸ್ಪರ್ದೆ ಎನ್ನಲಾಗುತ್ತಿದ್ದರೂ, ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮಾತ್ರ ನೇರ ಸ್ಪರ್ಧೆ ಎಂದ ಅವರು, ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಹಕ್ಕುಪತ್ರ- ನಿವೇಶನ ಇಲ್ಲ. ಅರಣ್ಯ ಸಮಸ್ಯೆ ಸಾಕಷ್ಟಿದೆ. ಮುಖ್ಯವಾಗಿ ಕಂದಾಯ ಇಲಾಖೆ ಸಮಸ್ಯೆ ಗಂಭೀರವಾಗಿದೆ. ಇದರ ಬಗ್ಗೆ ಹೆಚ್ಚು ಗಮನ ಹರಿಸಿ ಪೋಡಿಮುಕ್ತ ಕೊಡಗು ಮಾಡಲು ಯತ್ನಿಸುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡ ಬಿ.ಎ. ಜೀವಿಜಯ ಅವರು ಪಕ್ಷ ತ್ಯಜಿಸಿರುವುದು ಜೆಡಿಎಸ್ಗೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ತಾ. ೮ರಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರ ಸ್ವಾಮಿ ಅವರುಗಳು ಪ್ರಚಾರಕ್ಕೆ ಆಗಮಿಸಲಿದ್ದಾರೆ. ರೈತ ಪರವಾಗಿರುವ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ತಿಳಿಸಿದೆ ಎಂದರು.
ಮಡಿಕೇರಿ ಕ್ಷೇತ್ರದಲ್ಲೂ ಕಾಂಗ್ರೆಸ್ನಿAದ ಜಾತಿ ರಾಜಕೀಯದ ಮಾತು ಕೇಳಿ ಬರುತ್ತಿದೆ. ಆದರೆ, ಕೊಡಗಿನಲ್ಲಿ ಜಾತಿ ರಾಜಕೀಯ ಯಾವುದೇ ಕಾರಣಕ್ಕೂ ನಡೆಯದು. ಕ್ಷೇತ್ರದ ಎಲ್ಲಾ ವರ್ಗದವರು ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಕಾAಗ್ರೆಸ್ ಅಭ್ಯರ್ಥಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಅಭ್ಯರ್ಥಿ ತಾವು ಹಿಂದೆ ಪ್ರತಿನಿಧಿಸಿರುವ ಅರಕಲಗೋಡು ಕ್ಷೇತ್ರದ ಅಭಿವೃದ್ಧಿಯಲ್ಲೇ ವಿಫಲರಾಗಿದ್ದಾರೆ. ಇದೀಗ ಇಲ್ಲಿ ಬಂದರೂ ಸಮಸ್ಯೆಗಳತ್ತ ಗಮನ ಹರಿಸುವುದಿಲ್ಲ. ಇವರ ಮೂಲ ಕ್ಷೇತ್ರ ಅರಕಲಗೋಡು ಅಭಿವೃದ್ಧಿಯಲ್ಲಿ ತೀರಾ ಕೆಳಗಿದೆ. ಆದರೆ, ಇದೀಗ ಕೊಡಗಿನ ಬಗ್ಗೆ ಗೇಲಿ ಮಾಡುವುದನ್ನು ತಾವು ಕೊಡಗಿನವರಾಗಿ ಸಹಿಸುವುದಿಲ್ಲ. ಇದಕ್ಕಿಂತಲೂ ಕೊಡಗು ಅಭಿವೃದ್ದಿ ಕಂಡಿದೆ. ಆದರೆ, ನಿರೀಕ್ಷಿತಮಟ್ಟದ ಅಭಿವೃದ್ಧಿಯಾಗಿಲ್ಲ ಎಂಬುದು ತಮ್ಮ ನೇರ ನುಡಿ ಎಂದು ಮುತ್ತಪ್ಪ ಹೇಳಿದರು.
ಕಾಂಗ್ರೆಸ್ನ ಸ್ಥಳೀಯ ನಾಯಕರು ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿದ್ದಾರೆ. ಆದರೆ, ತಾವು ಬಿಜೆಪಿ ಪರ ಎಂಬAತೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಕಾರ್ಮಿಕ ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿರುವ ತಮಗೆ ಬಿಜೆಪಿಯಿಂದ ಈ ಹಿಂದೆ ಆಹ್ವಾನವಿತ್ತಾದರೂ, ತಾವೂ ಹೋಗಿಲ್ಲ. ಸ್ಪರ್ಧಿಸಿರುವುದು ರೈತ ಪರವಾಗಿರುವ ಜೆಡಿಎಸ್ ಪಕ್ಷದಿಂದ ಇದು ಕ್ಷೇತ್ರದ ಜನತೆಗೆ ತಿಳಿದಿದೆ ಎಂದರು.