ಮಡಿಕೇರಿ, ಮೇ ೩: ತಾನು ಏಕಾಏಕಿ ಚುನಾವಣಾ ಕಣಕ್ಕೆ ಬಂದಿಲ್ಲ. ಕಳೆದ ೧೩ ವರ್ಷಗಳಿಂದ ಹೋರಾಟದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು ಬಂದ ವ್ಯಕ್ತಿ ತಾನಾಗಿದ್ದು, ತನ್ನ ಜನಪರವಾದ ನಿಲುವು - ಹೋರಾಟವನ್ನು ಅರ್ಥೈಸಿಕೊಂಡು ಈ ಬಾರಿ ಜನತೆ ತನಗೆ ಬೆಂಬಲ ನೀಡಲಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಅಭ್ಯರ್ಥಿಯಾದ ಅಮೀನ್ ಮೊಹಿಸಿನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣಾ ಕಣ ಮೊದಲ ಅನುಭವವಾಗಿದೆ. ಆದರೆ, ಕಾರ್ಯಕರ್ತರು ಟೊಂಕಕಟ್ಟಿ ತಮ್ಮ ಪರ ಕೆಲಸ ಮಾಡುತ್ತಿದ್ದು, ಗೆಲುವಿನ ವಿಶ್ವಾಸವನ್ನು ಹೊಂದಿರುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್, ಜೆ.ಡಿ.ಎಸ್.ನೊಂದಿಗೆ ಎಸ್.ಡಿ.ಪಿ.ಐ. ಕೂಡ ಪ್ರಬಲ ಸ್ಪರ್ಧೆಯಲ್ಲಿದ್ದು, ‘ಫೋರ್ ಆ್ಯಂಗಲ್’ ಸ್ಪಧೆೆðಯಿರುವುದು ನಿಶ್ಚಿತ. ಪ್ರಮುಖವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವನ್ಯಜೀವಿ- ಮಾನವ ಸಂಘರ್ಷ, ರೈತರ ಬಹಳಷ್ಟು ಸಮಸ್ಯೆಗಳು, ಗ್ರಾಮೀಣ ಪ್ರದೇಶದ ಸಮಸ್ಯೆಗಳು, ನಿರುದ್ಯೋಗ, ಮಹಿಳಾ ಸುರಕ್ಷತೆಯಂತಹ ಗಂಭೀರ ವಿಚಾರಗಳಿವೆ. ಈ ಬಗ್ಗೆ ತಾನು ಪ್ರಯತ್ನ ನಡೆಸಲಿರುವುದಾಗಿ ಅಮೀನ್ ಮೊಹಿಸಿನ್ ಹೇಳಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಾಸಕರು ತಂದ ಅನುದಾನ ಏನೇನೂ ಇಲ್ಲ. ಐದು ಬಾರಿಯ ಶಾಸಕರಾಗಿದ್ದರೂ ನಿರೀಕ್ಷಿತ ಅಭಿವೃದ್ಧಿಯಾಗಲಿ, ವಿಶೇಷ ಅನುದಾನವಾಗಲಿ ಬಂದಿಲ್ಲ. ಸರಕಾರವೂ ಜಿಲ್ಲೆಯನ್ನು ಹಗುರವಾಗಿ ಕಂಡಿರುವುದನ್ನು ಜನತೆ ಅರಿತಿದ್ದಾರೆ. ಇದನ್ನು ಪರಿಗಣಿಸಿ ಹೋರಾಟದ ಮೂಲಕ ಗುರುತಿಸಿಕೊಂಡಿರುವ ತನಗೆ ಜನರು ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಸ್.ಡಿ.ಪಿ.ಐ, ಕೇವಲ ಮುಸಲ್ಮಾನರ ಮತವನ್ನು ನೆಚ್ಚಿಕೊಂಡಿಲ್ಲ. ಮಡಿಕೇರಿ, ಮೇ ೩: ತಾನು ಏಕಾಏಕಿ ಚುನಾವಣಾ ಕಣಕ್ಕೆ ಬಂದಿಲ್ಲ. ಕಳೆದ ೧೩ ವರ್ಷಗಳಿಂದ ಹೋರಾಟದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು ಬಂದ ವ್ಯಕ್ತಿ ತಾನಾಗಿದ್ದು, ತನ್ನ ಜನಪರವಾದ ನಿಲುವು - ಹೋರಾಟವನ್ನು ಅರ್ಥೈಸಿಕೊಂಡು ಈ ಬಾರಿ ಜನತೆ ತನಗೆ ಬೆಂಬಲ ನೀಡಲಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಅಭ್ಯರ್ಥಿಯಾದ ಅಮೀನ್ ಮೊಹಿಸಿನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣಾ ಕಣ ಮೊದಲ ಅನುಭವವಾಗಿದೆ. ಆದರೆ, ಕಾರ್ಯಕರ್ತರು ಟೊಂಕಕಟ್ಟಿ ತಮ್ಮ ಪರ ಕೆಲಸ ಮಾಡುತ್ತಿದ್ದು, ಗೆಲುವಿನ ವಿಶ್ವಾಸವನ್ನು ಹೊಂದಿರುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್, ಜೆ.ಡಿ.ಎಸ್.ನೊಂದಿಗೆ ಎಸ್.ಡಿ.ಪಿ.ಐ. ಕೂಡ ಪ್ರಬಲ ಸ್ಪರ್ಧೆಯಲ್ಲಿದ್ದು, ‘ಫೋರ್ ಆ್ಯಂಗಲ್’ ಸ್ಪಧೆÉðಯಿರುವುದು ನಿಶ್ಚಿತ. ಪ್ರಮುಖವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವನ್ಯಜೀವಿ- ಮಾನವ ಸಂಘರ್ಷ, ರೈತರ ಬಹಳಷ್ಟು ಸಮಸ್ಯೆಗಳು, ಗ್ರಾಮೀಣ ಪ್ರದೇಶದ ಸಮಸ್ಯೆಗಳು, ನಿರುದ್ಯೋಗ, ಮಹಿಳಾ ಸುರಕ್ಷತೆಯಂತಹ ಗಂಭೀರ ವಿಚಾರಗಳಿವೆ. ಈ ಬಗ್ಗೆ ತಾನು ಪ್ರಯತ್ನ ನಡೆಸಲಿರುವುದಾಗಿ ಅಮೀನ್ ಮೊಹಿಸಿನ್ ಹೇಳಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಾಸಕರು ತಂದ ಅನುದಾನ ಏನೇನೂ ಇಲ್ಲ. ಐದು ಬಾರಿಯ ಶಾಸಕರಾಗಿದ್ದರೂ ನಿರೀಕ್ಷಿತ ಅಭಿವೃದ್ಧಿಯಾಗಲಿ, ವಿಶೇಷ ಅನುದಾನವಾಗಲಿ ಬಂದಿಲ್ಲ. ಸರಕಾರವೂ ಜಿಲ್ಲೆಯನ್ನು ಹಗುರವಾಗಿ ಕಂಡಿರುವುದನ್ನು ಜನತೆ ಅರಿತಿದ್ದಾರೆ. ಇದನ್ನು ಪರಿಗಣಿಸಿ ಹೋರಾಟದ ಮೂಲಕ ಗುರುತಿಸಿಕೊಂಡಿರುವ ತನಗೆ ಜನರು ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಸ್.ಡಿ.ಪಿ.ಐ, ಕೇವಲ ಮುಸಲ್ಮಾನರ ಮತವನ್ನು ನೆಚ್ಚಿಕೊಂಡಿಲ್ಲ.