ಮಡಿಕೇರಿ, ಮೇ ೩ : ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೀಡಿದ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚಿನ ಅವಧಿಗೆ ಆಡಳಿತ ಮಾಡಿವೆ. ಆದರೆ ಬಿಜೆಪಿ ಕೇವಲ ೮ ವರ್ಷಗಳಲ್ಲಿನ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಉತ್ತಮ ಆಡಳಿತದೊಂದಿಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ನೆಮ್ಮದಿಯ ಜೀವನಕ್ಕೆ ಕೊಡುಗೆ ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ರೈತರು, ಬಡವರ್ಗದವರಿಗೆ ಸಾಕಷ್ಟು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಾಗಾಗಿ ಆಡಳಿತ ಮಾಡಲು ಯಾರು ಅರ್ಹರು ಎಂಬದನ್ನು ಜನರು ತೀಮಾನ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ೧೩೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ವಿಶಿಷ್ಟ ರೀತಿಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ೫೦ ವರ್ಷಗಳಿಂದ ಆಡಳಿತ ನಡೆಸಿದ ಪಕ್ಷದವರಂತೆ ಭರವಸೆ, ಆಶ್ವಾಸನೆಗಳ ಮೂಲಕ ಮತ ಕೇಳುತ್ತಿಲ್ಲ. ಬದಲಿಗೆ ಇದುವರೆಗೆ ಆಡಳಿತ ನಡೆಸಿದ ರೀತಿ, ಕೈಗೊಂಡ ಅಭಿವೃದ್ದಿ ಕಾರ್ಯಗಳು ಹಾಗೂ ನಡೆದು ಬಂದ ಹಾದಿಯನ್ನು ಜನರಿಗೆ ಮನದಟ್ಟು ಮಾಡಿಸುವ ಮೂಲಕ ಚುನಾವಣೆ ಎದುರಿಸುತ್ತಿರು ವದಾಗಿ ಅವರು ಹೇಳಿದರು. ಬಿಜೆಪಿ ಭಯೋತ್ಪಾದನೆ ನಿಗ್ರಹಕ್ಕೆ ಬದ್ಧವಾಗಿದ್ದು, ದೇಶ ಪ್ರಬುದ್ಧವಾಗಿದೆ. ಒಂದೊಮ್ಮೆ ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿದ್ದ ದೇಶ ಇದೀಗ ಬೇರೆ ದೇಶಗಳಿಗೆ

(ಮೊದಲ ಪುಟದಿಂದ) ನೆರವು ನೀಡುವಷ್ಟರ ಮಟ್ಟಿಗೆ ಮುಂದುವರಿದಿದೆ. ಅರ್ಥವ್ಯವಸ್ಥೆ ಯಲ್ಲಿಯೂ ಯಶಸ್ಸು ಕಂಡಿದ್ದೇವೆ. ನೀಡಿರುವ ಭರವಸೆಯನ್ನು ಈಡೇರಿಸಿರುವದೇ ಬಿಜೆಪಿ ಸಾಧನೆಯಾಗಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ನೆರವು ನೀಡುವಷ್ಟರ ಮಟ್ಟಿಗೆ ಮುಂದುವರಿದಿದೆ. ಅರ್ಥವ್ಯವಸ್ಥೆ ಯಲ್ಲಿಯೂ ಯಶಸ್ಸು ಕಂಡಿದ್ದೇವೆ. ನೀಡಿರುವ ಭರವಸೆಯನ್ನು ಈಡೇರಿಸಿರುವದೇ ಬಿಜೆಪಿ ಸಾಧನೆಯಾಗಿದೆ ಎಂದು ಹೇಳಿದರು.

ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತದೆ ಎಂದು ಡಿ.ವಿ.ಎಸ್. ಕುಟುಕಿದರು. ಜೀವಿಜಯ ಅವರಿಗೆ ತಡವಾಗಿಯಾದರೂ ಜ್ಞಾನೋದಯ ವಾಗಿದೆ. ಬೇಗನೇ ಆಗಬೇಕಾಗಿತ್ತೆಂದು ಹೇಳಿದರು.

ಗೋಷ್ಠಿಯಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಉಪಾಧ್ಯಕ್ಷರಾದ ಚಿಲ್ಲನ ಗಣಿಪ್ರಸಾದ್, ಬಿ.ಕೆ. ಅರುಣ್‌ಕುಮಾರ್, ವಕ್ತಾರ ಮಹೇಶ್ ಜೈನಿ, ಮಡಿಕೇರಿ ತಾಲೂಕು ಮಂಡಲ ಅಧ್ಯಕ್ಷ ಕಾಂಗೀರ ಆಶ್ವಿನ್, ನಗರ ಮಂಡಲ ಅಧ್ಯಕ್ಷ ಮನು ಮಂಜುನಾಥ್, ಕಾರ್ಯದರ್ಶಿ ಕೆ.ಎಂ.ಅಪ್ಪಣ್ಣ ಇದ್ದರು.