ಗೋಣಿಕೊಪ್ಪ ವರದಿ, ಮೇ೨ : ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ಆಯೋಜಿಸಿದ್ದ ೮ ನೇ ವರ್ಷದ ಅಮ್ಮಕೊಡವ ಕೌಟುಂಬಿಕ ಅಮ್ಮತ್ತೀರ ಕ್ರಿಕೆಟ್ ಕಪ್ ಅನ್ನು ಬಲ್ಯಂಡ ಕುಟುಂಬ ಚೊಚ್ಚಲ ಬಾರಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್‌ನಲ್ಲಿ ಸೋಲನುಭವಿಸಿದ ಮನ್ನಕಮನೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆಂಡಮಾಡ ಮೂರನೇ, ನೆರೆಯಂಡಮ್ಮನ ನಾಲ್ಕನೇ ಸ್ಥಾನ ಲಭಿಸಿತು.
ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ ಬಲ್ಯಂಡ ತಂಡವು ಮನ್ನಕಮನೆ ತಂಡವನ್ನು ೨೭ ರನ್‌ಗಳಿಂದ ಮಣಿಸಿ ಕಪ್‌ಗೆ ಮುತ್ತಿಕ್ಕಿತು. ಬಲ್ಯಂಡ ೨ ವಿಕೆಟ್ ನಷ್ಟಕ್ಕೆ ೬೮ ರನ್ ದಾಖಲಿಸಿತು. ಮನ್ನಕಮನೆ ೪ ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿ ಸೋಲಿಗೆ ಶರಣಾಯಿತು.
ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಆಂಡಮಾಡ ತಂಡವು ನೆರೆಯಂಡಮ್ಮನ ತಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ನೆರೆಯಂಡಮ್ಮನ ೩ ವಿಕೆಟ್ ನಷ್ಟಕ್ಕೆ ೧೭ ರನ್ ದಾಖಲಿಸಿತು. ಆಂಡಮಾಡ ವಿಕೆಟ್ ಕಳೆದುಕೊಳ್ಳದೆ ೨೦ ರನ್ ದಾಖಲಿಸಿತು.
ಸೆಮಿಫೈನಲ್ : ಸೆಮಿಫೈನಲ್ ಪಂದ್ಯದಲ್ಲಿ ಮನ್ನಕಮನೆ ತಂಡವು ನೆರೆಯಂಡಮ್ಮನವನ್ನು ೬ ರನ್‌ಗಳಿಂದ ಸೋಲಿಸಿತು. ಮನ್ನಕಮನೆ ೨ ವಿಕೆಟ್ ಕಳೆದುಕೊಂಡು ೩೨ ರನ್ ಗುರಿ ನೀಡಿತು. ನೆರೆಯಂಡಮ್ಮನ ೬ ವಿಕೆಟ್ ಕಳೆದುಕೊಂಡು ೨೫ ರನ್‌ಗಳನಷ್ಟೆ ದಾಖಲಿಸಿತು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಬಲ್ಯಂಡ ತಂಡವು ಆಂಡಮಾಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಆಂಡಮಾಡ ೬ ವಿಕೆಟ್ ಕಳೆದುಕೊಂಡು ೨೯ ರನ್ ದಾಖಲಿಸಿತು. ಬಲ್ಯಂಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕ್ವಾರ್ಟರ್ ಫೈನಲ್‌ನಲ್ಲಿ ನೆರೆಯಂಡಮ್ಮನ ಚೀರಜಮ್ಮನವನ್ನು ೪ ರನ್‌ಗಳಿಂದ ಮಣಿಸಿತು. ಚೀರಜಮ್ಮನ ೨ ವಿಕೆಟ್ ನಷ್ಟಕ್ಕೆ ೩೩ ರನ್, ನೆರೆಯಂಡಮ್ಮನ ೧ ವಿಕೆಟ್ ಕಳೆದುಕೊಂಡು ೩೭ ರನ್ ದಾಖಲಿಸಿತು. ಆಂಡಮಾಡ ತಂಡವು ಪಾಡಿಯಮ್ಮಂಡವನ್ನು ೫೦ ರನ್‌ಗಳಿಂದ ಸೋಲಿಸಿತು. ಆಂಡಮಾಡ ೧ ವಿಕೆಟ್ ನಷ್ಟಕ್ಕೆ ೬೫ ರನ್, ಪಾಡಿಯಮ್ಮಂಡವು ೬ ವಿಕೆಟ್ ನಷ್ಟಕ್ಕೆ ೧೩ ರನ್ ದಾಖಲಿಸಿತು. ಮನ್ನಕಮನೆ ತಂಡವು ಪುತ್ತಾಮನೆಯನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಪುತ್ತಾಮನೆ ೫ ವಿಕೆಟ್‌ಗೆ ೩೩ ರನ್, ಮನ್ನಕಮನೆ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಬಲ್ಯಂಡವು ಬಾನಂಡವನ್ನು ೧೧ ರನ್‌ಗಳಿಂದ ಮಣಿಸಿತು. ಬಲ್ಯಂಡ ೩ ವಿಕೆಟ್‌ಗೆ ೩೯ ರನ್ ಗುರಿ ನೀಡಿತು. ಬಾನಂಡ ೬ ವಿಕೆಟ್ ಕಳೆದುಕೊಂಡು ೨೭ ರನ್ ದಾಖಲಿಸಿತು.
ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಿಂಕ್ ಹಾಕಿ ಕಪ್ ಅನ್ನು ಅಮ್ಮ ಕೊಡವ ಯುನೈಟೆಡ್ ತಂಡ ಗೆದ್ದುಕೊಂಡಿತು. ಅಮ್ಮಕೊಡವ ಆಲ್ ಸ್ಟಾರ್ ದ್ವಿತೀಯ ತಂಡವಾಗಿ ಹೊರಹೊಮ್ಮಿತು.
ಪ್ರಶಸ್ತಿ : ಸರಣಿ ಶೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬಲ್ಯಂಡ ತಂಡದ ಪ್ರಜ್ವಲ್ ಪಡೆದುಕೊಂಡರು. ಮನ್ನಕಮನೆ ಅಭಿಲಾಷ್ ಬೆಸ್ಟ್ ಆಲ್‌ರೌಂಡರ್, ಆಂಡಮಾಡ ಆದರ್ಶ್ ಉತ್ತಮ ಬೌಲರ್, ಮನ್ನಕಮನೆ ಅಖಿಲೇಶ್ ಉತ್ತಮ ಬ್ಯಾಟ್ಸ್ಮನ್, ಆಂಡಮಾಡ ಜಿತೇಶ್ ಹೆಚ್ಚು ಸಿಕ್ಸರ್, ನೆರೆಯಂಡಮ್ಮನ ನವಿನ್ ಹಿರಿಯ ಆಟಗಾರ, ಸಮುಕ್ ಕಿರಿಯ ಆಟಗಾರ, ಮನ್ನಕಮನೆ ದೀಕ್ಷಿತ್ ಬೆಸ್ಟ್ ಫಾರ್ವರ್ಡ್, ಪಾಡಿಯಮ್ಮನ ತಂಡ ಶಿಸ್ತಿನ ತಂಡ, ಬಾನಂಡ ಚಿರಾಗ್ ಭರವಸೆಯ ಆಟಗಾರ, ಫೈನಲ್ ಪಂದ್ಯದಲ್ಲಿ ಬಲ್ಯಂಡ ಕಾಮಿತ್ ಪ್ರಭು ಬೆಸ್ಟ್ ಬೌಲರ್, ಬಲ್ಯಂಡ ಶರತ್ ಬೆಸ್ಟ್ ಬ್ಯಾಟ್ಸ್ಮನ್ ಬಹುಮಾನ ಪಡೆದುಕೊಂಡರು. ರಿಂಕ್ ಹಾಕಿಯಲ್ಲಿ ಹೆಚ್ಚು ಗೋಲು ದಾಖಲೆಯಲ್ಲಿ ದೀಕ್ಷಿತ್, ಉತ್ತಮ ಗೋಲಿ ಸ್ಥಾನವನ್ನು ಮನ್ನಕಮನೆ ದೀಕ್ಷಿತ್, ಡಿಫೆಂಡರ್ ಬಹುಮಾನವನ್ನು ಪ್ರಜ್ವಲ್, ಸರಣಿ ಶ್ರೇಷ್ಠ ಸ್ಥಾನವನ್ನು ಅಮ್ಮತ್ತೀರ ಕವಿನ್ ಪಡೆದುಕೊಂಡರು.
ತಾಂತ್ರಿಕ ವರ್ಗದಲ್ಲಿ ಚೊಟ್ಟೋಳಿಯಮ್ಮನ ವರುಣ್, ಪುತ್ತಾಮನೆ ಪರ್ವತ್, ಅಮ್ಮತ್ತೀರ ದೀಕ್ಷಿತ್, ಅಮ್ಮತ್ತೀರ ಗಣೇಶ್, ಅಮ್ಮತ್ತೀರ ಬಿಪಿನ್, ನೆರೆಯಂಡಮ್ಮನ ಗಲ್ಫಿ, ಚಿಲ್ಲಜಮ್ಮನ ದರ್ಶನ್, ಅಮ್ಮತ್ತಿರ ಸುನಿಲ್, ಬಾನಂಡ ಚಿರು, ಬಾನಂಡ ಕ್ರಿಶಿರಾಜ್ ಕಾರ್ಯನಿರ್ವಹಿಸಿದರು. ೨೦೨೪ ರಲ್ಲಿ ನಡೆಯಲಿರುವ ೯ ನೇ ವರ್ಷದ ಅಮ್ಮಕೊಡವ ನಮ್ಮೆಯನ್ನು ಅಚ್ಚಿಯಂಡ ಕುಟುಂಬಕ್ಕೆ ಜವಬ್ದಾರಿ ನೀಡಲಾಯಿತು. ಅಚ್ಚಿಯಂಡ ಕುಟುಂಬದ ಸದಸ್ಯರಿಗೆ ಧ್ವಜ ಹಸ್ತಾಂತರಿಸಿ ಶುಭಕೋರಲಾಯಿತು.
ಸನ್ಮಾನ : ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರಾದ ಮನ್ನಕಮನೆ ಸೌಮ್ಯ ಬಾಲು, ಅಮ್ಮತ್ತೀರ ವಿ. ರಾಜೇಶ್, ಪುತ್ತಾಮನೆ ಜೀವನ್, ಅಮ್ಮತ್ತೀರ ಆರತಿ ಸುರೇಶ್, ಧರಣಿ ಆಶಿತಾ ಸನ್ಮಾನ ಸ್ವೀಕರಿಸಿದರು.
ಅನುದಾನಕ್ಕೆ ಒತ್ತಾಯ : ಸರ್ಕಾರ ಅಮ್ಮಕೊಡವ ಜನಾಂಗದ ನಮ್ಮೆಗೆ ವಿಶೇಷ ಅನುದಾನ ಘೋಷಿಸಬೇಕು ಎಂದು ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್. ಪ್ರತ್ಯು ಒತ್ತಾಯಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಕಾರ್ಯ ಚಟುವಟಿಕೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯವಾಗಿದೆ. ನಮ್ಮ ಜನಾಂಗಕ್ಕೆ ೫ ಲಕ್ಷ ರೂ. ವಿಶೇಷ ಅನುದಾನವನ್ನು ನೀಡಬೇಕು. ಅಮ್ಮಕೊಡವ ಸಮಾಜ ಕಟ್ಟಡ ನಿರ್ಮಾಣ ಕೂಡ ಅಗತ್ಯವಾಗಿತ್ತು. ಸೂಕ್ತ ನಿವೇಶನ, ಅನುದಾನ ನೀಡಬೇಕು ಎಂದರು.
ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ, ನಮ್ಮೆ ಆಚರಣೆ ನಮ್ಮ ಸಂಬAಧವನ್ನು ಹೆಚ್ಚಿಸುತ್ತಿದೆ. ಕ್ರೀಡೆಯೊಂದಿಗೆ ಕಲೆಗೂ ಪ್ರೋತ್ಸಾಹ ದೊರೆಯುವಂತಾಗಿದೆ ಎಂದರು.
ಈ ಸಂದರ್ಭ ಅಮ್ಮತ್ತಿರ ಕ್ರಿಕೆಟ್ ಕಪ್ ಅಧ್ಯಕ್ಷ ಅಮ್ಮತ್ತಿರ ಆರ್. ಪ್ರಸಾದ್, ಅಖಿಲ ಅಮ್ಮಕೊಡವ ಸಮಾಜ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಸಮಾಜದ ಪ್ರಮುಖರಾದ ಡಾ. ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್, ಚಮ್ಮಣಮಾಡ ಬಿ. ಗಿರೀಶ್, ಮನ್ನಕಮನೆ ಕೆ. ರವಿ, ಅಮ್ಮತ್ತೀರ ರೇವತಿ ಪರಮೇಶ್ವರ್, ಬಾನಂಡ ಆಶಾ ಸುಧನ್, ಮನ್ನಕಮನೆ ಶ್ವೇತಾ ರವಿ, ಬಾಚಮ್ಮಂಡ ಬಿ. ಮಾದಮಯ್ಯ, ಮನ್ನಕಮನೆ ಸೌಮ್ಯ ಬಾಲು, ಅಮ್ಮತ್ತೀರ ಆರತಿ ಸುರೇಶ್, ಅಮ್ಮತ್ತೀರ ವಿ. ರಾಜೇಶ್, ಪುತ್ತಾಮನೆ ಜೀವನ್, ಹೆಮ್ಮಚ್ಚಿಮನೆ ಧರಣಿ ಆಶಿತಾ, ನೆರೆಯಂಡಮ್ಮAಡ ಎಸ್ ಬೆಳ್ಯಪ್ಪಮಯ್ಯ ಇದ್ದರು.