ಸುಂಟಿಕೊಪ್ಪ, ಮೇ ೨: ಮಡಿಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿ ಎಂದು ಜೆಡಿಎಸ್ ಆಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.
ಸುಂಟಿಕೊಪ್ಪದ ಬಸ್ ನಿಲ್ದಾಣದಲ್ಲಿ ಜಾತ್ಯತೀತ ಜನತಾದಳ ಪರ ಬಹಿರಂಗ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ.
ದೇಶದಲ್ಲಿ ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ಅತೀಹೆಚ್ಚು ತೆರಿಗೆ ಹಣ ಪಾವತಿಯಾಗುತ್ತಿದೆ. ೨ ಲಕ್ಷದ ೩೫,೦೦೦ ರೂ ಹಣ ಪ್ರತಿವರ್ಷ ತೆರಿಗೆ ಸಂದಾಯ ವಾದರೂ ಕೇಂದ್ರ ಸರಕಾರ ಕನಿಷ್ಟ ಅದರ ಅರ್ಧದಷ್ಟು ಅನುದಾನ ರಾಜ್ಯಕ್ಕೆ ನೀಡುತ್ತಿಲ್ಲ ಇದು ಮಲತಾಯಿ ಧೋರಣೆಯಾಗಿದೆ ಎಂದರು.
ಜಿಲ್ಲಾ ಜೆಡಿಎಸ್ ಪಕ್ಷದ ಕೆ.ಎಂ.ಗಣೇಶ್ ಮಾತನಾಡಿ ಕಾಂಗ್ರೆಸ್ ಬಿಜೆಪಿ ಒಂದೆ ಮುಖದ ೨ ನಾಣ್ಯಗಳು ಎಂದರು. ಇಸಾಕ್ ಖಾನ್, ಕೆ.ಇ. ಕರೀಂ, ಇತರರು ಇದ್ದರು. ಅನಂತರ ರೋಡ್ ಶೋ ನಡೆಸಿ ಮತಯಾಚನೆಯನ್ನು ನಾಪಂಡ ಮುತ್ತಪ್ಪ ಮಾಡಿದರು.