ಚೆಟ್ಟಳ್ಳಿ, ಮೇ ೨: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ೫,೭,೧೦ ಹಾಗೂ +೨ ತರಗತಿಗಳಿಗೆ ನಡೆಸುವ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ದಾರುಲ್ ಉಲೂಂ ಮದ್ರಸ ಕುಶಾಲನಗರ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲ ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.
೫ನೇ ತರಗತಿಯಲ್ಲಿ ೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ಮಡಿಕೇರಿ ರೇಂಜ್ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಶೈಖ್ ಅಮಾನ್, ಮುಹಮ್ಮದ್ ಆಮೀರ್, ಆಯಿಷಾ ಫಾಝಿಲಾ ಕ್ರಮವಾಗಿ ಪಡೆದುಕೊಂಡಿದ್ದಾರೆ. ಪ್ರತ್ಯೇಕವಾಗಿ ಶೈಖ್ ಅಮಾನ್ ಜಿಲ್ಲಾ ಮಟ್ಟದಲ್ಲಿ ೨ನೇ ಸ್ಥಾನ ಹಾಗೂ ಮುಹಮ್ಮದ್ ಆಮೀರ್ ೩ನೇ ಸ್ಥಾನ ಪಡೆದಿದ್ದಾರೆ.
೭ನೇ ತರಗತಿಯಲ್ಲಿ ೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ರೇಂಜ್ ಮಟ್ಟದಲ್ಲಿ ೩ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
೧೦ನೇ ತರಗತಿಯಲ್ಲಿ ಕಲಿಯುತ್ತಿರುವ ಸಫ್ವಾನ್ ಜೆ.ಐ. ಎಂಬ ವಿದ್ಯಾರ್ಥಿಯೂ ಡಿಸ್ಟಿಂಕ್ಷ ನೊಂದಿಗೆ ಕೊಡಗು ಜಿಲ್ಲೆಯಲ್ಲಿ ಮೊದಲ ಶ್ರೇಣಿ ಪಡೆದಿದ್ದಾನೆ. ಫಾತಿಮಾ ನಾಸರ್ ೩ನೇ ಸ್ಥಾನ ಪಡೆದಿದ್ದು, ರೇಂಜ್ ಮಟ್ಟದಲ್ಲಿಯೂ ಉನ್ನತ ಸ್ಥಾನವನ್ನು ಪಡೆದು ಕೊಂಡಿದ್ದಾಳೆೆ. ಇವರಿಗೆ ಉನೈಸ್ ಫೈಝಿ ತರಬೇತಿ ನೀಡಿದ್ದರು.
+೨ ತರಗತಿಯಲ್ಲಿ ನಿಶಾನಾ ಹಾಗೂ ಆಯಿಷತು ಸಾನಿಯಾ ಎಂಬ ವಿದ್ಯಾರ್ಥಿನಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದ ರೊಂದಿಗೆ ಮೊದಲೆರೆಡು ಸ್ಥಾನಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ. ಉಸ್ತಾದ್ ಸ್ವಾಲಿಹ್ ಅಝ್ಹರಿ, ಮುಷ್ತಾಕ್ ದಾರಿಮಿ, ಸೂಫಿ ದಾರಿಮಿ ಅವರುಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.