ಮಡಿಕೇರಿ, ಮೇ ೨: ಬಹುಜನ ಸಮಾಜ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿವಿಲ್‌ಕುಮಾರ್ ಶನಿವಾರಸಂತೆ ಹಾಗೂ ಮಾದಾಪುರದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು. ರಾಷ್ಟಿçÃಯ ಪಕ್ಷವಾಗಿರುವ ಬಿಎಸ್‌ಪಿಯ ಧ್ಯೇಯೊದ್ದೇಶ, ಜನಪರವಾದ ಕಾರ್ಯಕ್ರಮಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವುದರೊಂದಿಗೆ ಮತಯಾಚನೆ ಮಾಡಿದರು. ಇವರೊಂದಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾ ಉಸ್ತುವಾರಿ ಭೀಮಪುತ್ರಿ ರೇವತಿರಾಜ್, ಇತರ ಪ್ರಮುಖರು ಪಾಲ್ಗೊಂಡಿದ್ದರು.