ಕೊಡಗು ಬಿಜೆಪಿ ಆಕ್ರೋಶ
ಮಡಿಕೇರಿ, ಮೇ ೨: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬಂದರೆ ಹಿಂದೂ ಸಂಘಟನೆಗಳಲ್ಲಿ ಒಂದಾದ ಭಜರಂಗ ದಳವನ್ನು ನಿಷೇಧಿಸುದಾಗಿ ಹೇಳಿದ್ದಾರೆ; ಇದನ್ನು ಕೊಡಗು ಬಿಜೆಪಿ ಖಂಡಿಸುವುದಾಗಿ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಜರಂಗದಳ ಹಿಂದೂಗಳ ಹಿತ ಕಾಯುವ ಸಂಘಟನೆಯೇ ಹೊರತು ಇತರ ಮತೀಯ ಸಂಘಟನೆಗಳ ಹಾಗೆ ಸಮಾಜದಲ್ಲಿ ಶಾಂತಿಯನ್ನು ಕದಡುವ ಸಂಘಟನೆ ಅಲ್ಲ ಎಂದಿರುವ ಅವರ ಭಜರಂಗದಳ ಹಿಂದೂ ಮಾತೆಯರ ಗೋವು, ಗುಡಿ, ಗೋಪುರಗಳ ರಕ್ಷಣೆಗೆ ಕಟಿಬದ್ಧ ಸಂಘಟನೆಯಾಗಿದೆ ಎಂದಿದ್ದಾರೆ. ಕಾಂಗ್ರೆಸ್ನ ಹಿಂದು ವಿರೋಧಿ ನೀತಿ ಅವರ ಚುನಾವಣೆ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಅನಾವರಣಗೊಂಡಿದ್ದು, ಪ್ರತಿ ಹಿಂದೂ ಕೂಡ ಕಾಂಗ್ರೆಸ್ನ ಈ ಕುಟಿಲ ನೀತಿಯನ್ನು ಗಮನಿಸುತಿದ್ದು, ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.