ಮಡಿಕೇರಿ, ಮೇ ೨ : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾ. ೫ ರಂದು ಮಡಿಕೇರಿ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ಜಾಥ ನಡೆಯಲಿದೆ ಎಂದು ಜಿ.ಪಂ. ಸಿಇಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ ೧೦ ಗಂಟೆಗೆ ಮಡಿಕೇರಿ ನಗರದ ಎ.ವಿ.ಶಾಲೆ ಬಳಿಯಿಂದ ಮತದಾನದ ಮಹತ್ವ ಸಾರುವ ಸಂದೇಶದೊAದಿಗೆ ಜಾಥ ಆರಂಭವಾಗಲಿದೆ. ಮಡಿಕೇರಿ ಮಾರುಕಟ್ಟೆ, ಮಹದೇವಪೇಟೆಗಾಗಿ ಸಾಗಿ ಹಳೆ ಬಸ್ ನಿಲ್ದಾಣದಲ್ಲಿ ಜಾಥಾ ಸಮಾಪನಗೊಳ್ಳಲಿದೆ.