ಮಡಿಕೇರಿ, ಮೇ ೨: ಆಮ್ ಆದ್ಮಿ ಪಕ್ಷದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಬೋಪಣ್ಣ ಪರವಾಗಿ ಕುಶಾಲನಗರ, ಸುಂಟಿಕೊಪ್ಪ, ವ್ಯಾಪ್ತಿಯಲ್ಲಿ ಪ್ರಚಾರ ನಡೆಯಿತು.

ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೂಡಿಗೆ, ಕೂಡುಮಂಗಳೂರು, ಗುಡ್ಡೆ ಹೊಸೂರು, ಅಂದಗೋವೆ ಕಡೆಗಳಲ್ಲಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಕಾರ್ಯದರ್ಶಿ ಪೃಥ್ವಿ, ಪ್ರಮುಖರಾದ ಕಲ್ಯಾಣಿ, ಥೋಮಸ್ ಮತ್ತು ಇತರರು ಈ ಸಂದರ್ಭ ಹಾಜರಿದ್ದರು.