ಪೊನ್ನಂಪೇಟೆ, ಮೇ ೨: ಮಂಡ್ಯ ಸಮೀಪದ ಮದ್ದೂರು ಹೆದ್ದಾರಿಯಲ್ಲಿ ಇಂದು ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಕಳೆದ ಎರಡು ತಿಂಗಳಿAದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತೂಚಮಕೇರಿಯ ದೀಕ್ಷಿತ್ ಅಯ್ಯಪ್ಪ ಎರಡು ದಿನಗಳ ಹಿಂದೆ ವೀರಾಜಪೇಟೆಯಲ್ಲಿ ನಡೆದ ಸಂಬAಧಿಕರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಇಂದು ಬೆಳಿಗ್ಗೆ ಬೆಂಗಳೂರಿಗೆ ತನ್ನ ಎನ್ಫೀಲ್ಡ್ ಬುಲ್ಲೆಟ್ ಬೈಕ್ನಲ್ಲಿ ತೆರಳುತ್ತಿದ್ದಾಗ ಮದ್ದೂರು ಸಮೀಪ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿಯಾಗಿ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಈತ ತೂಚಮಕೇರಿ ನಿವಾಸಿ ಪುಟ್ಟಂಗಡ ರಮೇಶ್ ಹಾಗೂ ಪುಷ್ಪ ದಂಪತಿ ಪುತ್ರ.