ಮಡಿಕೇರಿ, ಮೇ ೨: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಮೂರ್ನಾಡುವಿನ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕ್ರೀಡಾಕೂಟದ ಸೀನಿಯರ್ ಕ್ರಿಕೆಟ್ನಲ್ಲಿ ಹಾಲುಗುಂದ ತಂಡವು ಪಾರಾಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತು.
ಮೊದಲು ಬ್ಯಾಟ್ ಮಾಡಿದ ಹಾಲುಗುಂದ ತಂಡವು ಶ್ರೇಯಸ್ ಅವರ ಅರ್ದಶತಕ ಹಾಗೂ ಅವಿನಾಶ್ ಅವರ ಉಪಯುಕ್ತ ೩೫ ರನ್ಗಳ ನೆರವಿನಿಂದ ನಿಗದಿತ ೮ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೧೪ ರನ್ನುಗಳ ಗುರಿಯನ್ನು ನೀಡಿತು. ಪಾರಾಣೆ ತಂಡದ ಅಂಕಿತ್ ೫ ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಪಾರಾಣೆ ತಂಡವು ೫೩ ರನ್ನು ಗಳಿಸಲಷ್ಟೇ ಶಕ್ತರಾಗಿ ಸೋಲು ಒಪ್ಪಿಕೊಂಡಿತು. ಉತ್ತಮ ಬ್ಯಾಟ್ಸ್ಮ್ಯಾನ್. ಪಂದ್ಯ ಪುರುಷೋತ್ತಮ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶ್ರೇಯಸ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಪಾರಾಣೆ ತಂಡದ ಅಕ್ಷತ್ ಪಡೆದುಕೊಂಡರು. ಜೂನಿಯರ್ ವಿಭಾಗದಲ್ಲಿ ಪೊನ್ನಂಪೇಟೆ ತಂಡವು ಬೆಟ್ಟಗೇರಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಕೊಂಡಿತು. ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆವಿನ್ ಕುಟ್ಟಪ್ಪ ಪಡೆದುಕೊಂಡರು.
ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಬಿಟ್ಟಂಗಾಲ ತಂಡವು ಪಾರಾಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು. ಇದೇ ಪ್ರಥಮ ಬಾರಿಗೆ ನಡೆದ ಹಗ್ಗಜಗ್ಗಾಟದಲ್ಲಿ ಹಾತೂರು ತಂಡವು ಒಂಟಿಯAಗಡಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಪಾರಾಣೆ ತಂಡವು ಹಾತೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ವಹಿಸಿ ಕ್ರೀಡಾಕೂಟದ ಯಶಸ್ಸು ಕೊಡಗು ಜಿಲ್ಲೆಯ ಜನತೆಯ ಕ್ರೀಡಾ ಪ್ರೇಮ ಮತ್ತು ಕ್ರೀಡಾ ಆಸಕ್ತಿಗೆ ಮತ್ತಷ್ಟು ಮೆರುಗನ್ನು ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಟ್ರೋಫಿ ದಾನಿಗಳಾದ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ ಇವರ ಪೋಷಕರಾದ ಮಳ್ಳಡ ಪೂಣಚ್ಚ ಸುತಾ ಪೂಣಚ್ಚ, ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಖಚಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರುಗಳಾದ ತೊರೇರ ಮುದ್ದಯ್ಯ, ಪದಿಕಂಡ ಸುನಾ, ಚರ್ಮಂಡ ಅಪ್ಪುಣು, ಪೂವಯ್ಯ, ಮೂರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಕೊಂಗೆಪAಡ ರವಿ, ಮೂರೀರ ಶಾಂತಿ, ತಂಬAಡ ಮಂಜುನಾಥ್, ಚಳಿಯಂಡ ಕಮಲ, ಪುದಿಯತಂಡ ಜಾಲಿ, ಪ್ರಮುಖರಾದ ತೊರೇರ ರಾಜ, ಬೊಳ್ಳಡಿಚಂಡ ರಂಜಿ, ಬೈರಿಕುಂದಿರ ಪ್ರವೀಣ್, ಪಡಿಞರಂಡ ಗಿರೀಶ್, ಕಾಕೇರ ರವಿ, ಪದಿಕಂಡ ಕುಶ, ಪಡಿಞರಂಡ ಕವಿತಾ, ತೊರೇರ ಉಮೇಶ್, ಕೊಂಗೆಪAಡ ಕುಟ್ಟಪ್ಪ, ಪದಿಕಂಡ ಈಶ್ವರ ಮುಂತಾದವರು ಹಾಜರಿದ್ದರು.