ಕೂಡಿಗೆ, ಮೇ ೨ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ೧೦೪ ವರ್ಷದ ವಯೋವೃದ್ಧಿ ಕಾಳಮ್ಮ ಅವರು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮೊಮ್ಮಗಳ ಸಹಾಯದಿಂದ ಮತ ಚಲಾವಣೆ ಮಾಡಿದರು. ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣಾ ಸೆಕ್ಟರ್ ಅಧಿಕಾರಿ ಐ.ಕೆ. ಪುಟ್ಟಸ್ವಾಮಿ ಹಾಗೂ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಗೌರಮ್ಮ ಮತದಾನ ಮಾಡಿದರು.