‘ಕಾರ್ಮಿಕ' ಅಥವಾ ‘ಶ್ರಮಗಾರ' ಆಂಗ್ಲಭಾಷೆ ಯಲ್ಲಿನ ‘ಎಂಪ್ಲಾಯಿ' ಅಥವಾ ‘ಲೇಬರ್' ಎಂಬ ಅರ್ಥವನ್ನು ಹೊರಸೂಸುತ್ತದೆ. ಸರಳವಾಗಿ ಹೇಳುವುದಾದರೆ; ವ್ಯಕ್ತಿಯೊಬ್ಬ ತನ್ನ ದೈಹಿಕ ಇಲ್ಲವೇ ಬೌದ್ಧಿಕ ಸಾಮರ್ಥ್ಯವನ್ನು ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಬಾಡಿಗೆಗೆ ನೀಡಿ ಅದಕ್ಕೆ ತಕ್ಕುದಾದ ಪ್ರತಿಫಲ ವನ್ನು ಪಡೆಯುವುದಾಗಿದೆ. ದುಡಿಯುವ ವ್ಯಕ್ತಿ ‘ಕಾರ್ಮಿಕ' ಇಲ್ಲವೇ ‘ಎಂಪ್ಲಾಯಿ', ದುಡಿಸಿಕೊಂಡ ವ್ಯಕ್ತಿ ಇಲ್ಲವೇ ಸಂಸ್ಥೆಯು ‘ಎಂಪ್ಲಾಯರ್' ಎಂದು ಗುರುತಿಸಲ್ಪಡುತ್ತದೆ. ಇಲ್ಲಿ ದುಡಿಯುವ ವರ್ಗ ದೊಡ್ಡ ಸಂಖ್ಯೆಯಲ್ಲಿದ್ದರೂ ಸಂಪತ್ತಿನ ದೃಷ್ಟಿಯಿಂದ ಪಾಬಲ್ಯವಿರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ದುಡಿಸಿಕೊಳ್ಳುವ ವರ್ಗಬಂಡವಾಳ ಶಾಹಿಗಳಾಗಿದ್ದು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲರಾಗಿರುತ್ತಾರೆ. ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳೆಂಬ ಈ ಎರಡು ವರ್ಗಗಳು; ಯೂರೋಪ್, ಅಮೆರಿಕಾ ದೇಶಗಳ ಕೈಗಾರಿಕಾ ಕ್ಷೇತ್ರದ ಹಿನ್ನೆಲೆಯಲ್ಲಿ ‘ಕಾರ್ಮಿಕರು’ ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಅವಕಾಶ ಒದಗಿಬಂದಿತ್ತು. ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕಾದಂತ ಹಿಂದುಳಿದ ದೇಶಗಳಲ್ಲಿ ‘ಕೂಲಿಕಾರರು’ ಸಂಘಟಿತ ಹೋರಾಟಗಳಿಂದ ವಂಚಿತ ರಾಗುವ ಪ್ರಮೇಯ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಈ ದೇಶಗಳು ಕೃಷಿ ಪ್ರಧಾನ ದೇಶಗಳಾಗಿದ್ದುದು ಒಂದಾದರೆ, ಆಡಳಿತವು ಪರದೇಶಿಗಳದ್ದಾಗಿತ್ತು.
ಕೈಗಾರಿಕಾ ವಲಯದ ಕಾರ್ಮಿಕರೂ ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ದೀರ್ಘ ಹೋರಾಟವನ್ನೇ ಮಾಡಬೇಕಾಯಿತು. ಇಂಗ್ಲೆAಡ್, ಯೂರೋಪ್ ದೇಶಗಳು ಅದಾಗಲೇ ಬಲಿಷ್ಠವಾದ ಸಮುದ್ರ ನೌಕಾ ಸೈನ್ಯ ದಳಗಳನ್ನು ಕಟ್ಟಿಕೊಂಡು, ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ತಮ್ಮ ವ್ಯಾಪಾರ ವಿಸ್ತರಣೆಯಿಂದ ಅವಕಾಶವಿದ್ದ ಕಡೆ ೆಗಳಲ್ಲಿ ಸಂಪತ್ತನ್ನು ಕೊಳ್ಳೆಹೊಡೆಯುತ್ತಾ ಹೊಸ ದೇಶಗಳನ್ನು, ವಶಪಡಿಸಿಕೊಂಡು ತಮ್ಮ ವಸಾಹತುಗಳೆಂದು ಗುರುತಿಸಿಕೊಳ್ಳತೊಡಗಿದ್ದರು. ಅಲ್ಲಿನ ಮೂಲ ನಿವಾಸಿಗಳನ್ನು ತಮ್ಮ ಮದ್ದು-ಗುಂಡುಗಳ ಬಲದಿಂದ ಸೋಲಿಸಿ ಗುಲಾಮರನ್ನಾಗಿಸಿ, ಕಾರ್ಮಿಕರನ್ನಾಗಿ ಮಾಡಿಕೊಂಡರು. ಅದರಿಂದ ಗಳಿಸಿದ ಅಪಾರ ಸಂಪತ್ತಿನಿAದ, ತಮ್ಮ ದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಏಕಸ್ವಾಮ್ಯವನ್ನು ಮೆರೆದರು. ನೆಪಕ್ಕೆ ವಸಾಹತು ದೇಶಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಿ, ಕಾರ್ಮಿಕ ವರ್ಗದಿಂದ ದಿನವೊಂದಕ್ಕೆ ಹದಿನಾರು ಗಂಟೆಗಳಷ್ಟು ಬಿಡುವಿಲ್ಲದ ದುಡಿತ, ತಕ್ಕ ಸಂಭಾವನೆ ನೀಡದಿರುವುದು, ರಜೆ ಕೊಡದಿರುವುದು ಮುಂತಾದ ಅಮಾನವೀಯ ಕೃತ್ಯಗಳಿಂದ ರೋಸಿಹೋದ ‘ಕಾರ್ಮಿಕ ವರ್ಗ' ಅಮೆರಿಕಾದ ಚಿಕಾಗೋ ನಗರದಲ್ಲಿ, ೧೮೬೦ನೇ ಇಸವಿಯ ಮೇ ತಿಂಗಳ ಒಂದನೇ ದಿನಾಂಕದAದು ಪ್ರತಿಭಟನೆಯನ್ನು ನಡೆಸಿದರು. ಇದು ಹಿಂಸಾಚಾರಕ್ಕೆ ತಿರುಗಿ ಸಾವು ನೋವುಗಳಿಗೆ ಕಾರಣವಾಗಿತ್ತು. ಇದಾದ ಬಳಿಕ ಪ್ರಪಂಚದ ಅನೇಕ ಭಾಗಗಳಲ್ಲಿ ಇಂತಹ ಕಾರ್ಮಿಕರ ಸಂಘಟನೆಯು ತಮ್ಮ ನ್ಯಾಯಯುತ ಹಕ್ಕುಗಳ ಹೋರಾಟದಲ್ಲಿ ತೊಡಗಿದವು. ಇದೆಲ್ಲದರ ಒಟ್ಟು ಪರಿಣಾಮವಾಗಿ ಅಮೆರಿಕಾ ದೇಶದಲ್ಲಿ ಮೊದಲ ಬಾರಿಗೆ, ೧೯೧೬ರಲ್ಲಿ; ಸುಮಾರು ಐವತ್ತು ವರ್ಷಗಳ ನಂತರ, ಕಾರ್ಮಿಕರಿಗೆ ದಿನಕ್ಕೆ ಹದಿನಾರು ಗಂಟೆಗಳ ದುಡಿತಕ್ಕೆ ಬದಲಾಗಿ ಎಂಟು ಗಂಟೆಗಳನ್ನು ನಿಗದಿಪಡಿಸಿತು. ಅಂತೆಯೇ ಇತರೆ ನ್ಯಾಯಯುತ ಬೇಡಿಕೆಗಳನ್ನು ಜಾರಿಗೆ ತರಲಾಯಿತು. ನಮ್ಮ ಭಾರತ ದೇಶದಲ್ಲಿ ಕೂಡ ಕೆಂಪು ಬಾವುಟದ ಸಂಘಟನೆಯ ಅಡಿಯಲ್ಲಿ ಹೋರಾಟ ನಡೆಸಿದ ಫಲವಾಗಿ ೧೯೨೩ನೇ ಇಸವಿಯಿಂದ ಕಾರ್ಮಿಕರ ದಿನಾಚರಣೆಯನ್ನು ಮಾಡಲಾಗುತ್ತಿದೆ. ವಿಶೇಷವೆಂದರೆ, ‘ಮೇ ಡೇ' ಮತ್ತು ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ' ಎಂಬ ಎರಡು ಬೇರೆ-ಬೇರೆ ಸಂದರ್ಭಗಳನ್ನು ಮೇ ತಿಂಗಳ ಒಂದರAದು ಆಚರಿಸಲಾಗುತ್ತದೆ. ಇಂಗ್ಲೆಡ್ ಮತ್ತು ಮಧ್ಯ ಯೂರೋಪ್ ದೇಶಗಳಲ್ಲಿ ಅದಾಗಲೇ ‘ವಸಂತೋತ್ಸವ ಹಬ್ಬ'ವಾಗಿ ಮೇ ಒಂದನೇ ದಿನಾಂಕದAದು ಆಚರಿಸುತ್ತಿದ್ದರು. ಸೂರ್ಯ ಉತ್ತರಾರ್ಧಗೋಳದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುವ ದಿನವನ್ನಾಗಿ, ಅದುವರೆಗಿನ ಚಳಿಯ ದಿನಗಳು ದೂರವಾಗಿ ಮರಗಿಡಗಳಲ್ಲಿ ಎಲೆ ಚಿಗುರು, ಹೂ ಕಾಣಿಸಿಕೊಳ್ಳುವ ವಸಂತನ ಆಗಮನವನ್ನು ಅವರು ಸಂಭ್ರಮೋತ್ಸವ ದಿಂದ ಆಚರಿಸುತ್ತಿದ್ದರು. ಒಟ್ಟಿನಲ್ಲಿ ಒಂದೇ ದಿವಸದಂದು ಎರಡೆರಡು ಸಂಭ್ರಮಗಳ ಆಚರಣೆಯು ಕಾರ್ಮಿಕ ವಲಯದಲ್ಲಿ ಉತ್ಸಾಹವನ್ನು ದ್ವಿಗುಣಗೊಳಿಸಿತು! ಮತ್ತು ಅಮೆರಿಕಾ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ, ಪ್ರತಿವರ್ಷ ಮೇ ಒಂದನೇ ದಿನಾಂಕದAದು "ಅಂತಾರಾಷ್ಟಿçÃಯ ಕಾರ್ಮಿಕರ ದಿನಾಚರಣೆ"ಯನ್ನು ಸಂಭ್ರಮದಿAದ ಆಚರಿಸುವ ಪದ್ಧತಿ ಪ್ರಾರಂಭವಾಯಿತು. ಕಾರ್ಮಿಕ ವರ್ಗಕ್ಕೆ ದಿನವೊಂದಕ್ಕೆ ಎಂಟು ಗಂಟೆಗಳ ದುಡಿತ, ಎಂಟು ಗಂಟೆಗಳ ಮನೋರಂಜನೆ ಮತ್ತು ಉಳಿದ ಎಂಟು ಗಂಟೆಗಳು ವಿಶ್ರಾಂತಿ ಎಂಬ ತತ್ವಕ್ಕೆ ಬದ್ಧವಾಯಿತು.
ಸುಮಾರು ಇನ್ನೂರೈವತ್ತು ವರ್ಷಗಳಿಗೂ ಹೆಚ್ಚಿನ ಅವಧಿಯ ಪ್ರಪಂಚದ ಕೈಗಾರಿಕೀಕರಣದ ಆರಂಭದಲ್ಲಿದ್ದ ಮುಖ್ಯ ಕೈಗಾರಿಕೆಗಳಾದ ಬಟ್ಟೆ ಗಿರಣಿಗಳು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು, ಮುಂತಾದ ಕೆಲವೇ ಕೆಲವು ಉದ್ದಿಮೆಗಳಿಂದ ತೊಡಗಿ, ಇಂದು ಸಾವಿರಾರು ವಿಧದ ಕೈಗಾರಿಕೋದ್ದಿಮೆಗಳು ನಿತ್ಯೋತ್ಸವವನ್ನು ನಡೆಸಿವೆ. ಕಾರ್ಮಿಕರು ಮತ್ತು ಮಾಲೀಕರು ಎಂಬ ಕಾನೂನಿನ ಚೌಕಟ್ಟಿನಡಿಯಲ್ಲಿ ವ್ಯಕ್ತಿಗಳ, ದೇಶಗಳ ಅಭಿವೃದ್ಧಿಯಲ್ಲಿ ಸಾಗುತ್ತಿದೆ. ತನ್ಮೂಲಕ ಕಾರ್ಮಿಕರು ಒಟ್ಟು ಪ್ರಪಂಚದ ಅಭಿವೃದ್ಧಿಯಲ್ಲಿ ತಮ್ಮ ಸಾಮೂಹಿಕ ಕೊಡುಗೆಯನ್ನು ದೃಷ್ಟಿಯಲ್ಲಿರಿಸಿ, ಅವರ ತ್ಯಾಗ, ಕೊಡುಗೆ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗಳಲ್ಲಿನ ಸಾಧನೆಯಗಳನ್ನೂ ನೆನೆದು ಅವರಿಗೆ ಗೌರವ ನೀಡುವ ಸಲುವಾಗಿ ‘ಅಂತಾರಾಷ್ಟಿçÃಯ ಕಾರ್ಮಿಕರ ದಿನಾಚರಣೆಯನ್ನು' ಪ್ರತೀವರ್ಷ ಮೇ ಒಂದನೇ ತಾರೀಕಿನಂದು ಆಚರಿಸಲಾಗುತ್ತದೆ.
ಪ್ರಸ್ತುತದ ಕಂಪ್ಯೂಟರ್ ಯುಗದಲ್ಲಿ ಮನುಷ್ಯರ ಹಿತ ಕೈಗಾರಿಕೆಗಳಲ್ಲಿ ರೊಬೊಟಿಕ್ ಯಂತ್ರಮಾನವರು ಕೃತಕ ಬುದ್ಧಿಯಿಂದ ಕೆಲಸ ನಿರ್ವಹಿಸುವುದು, ಯುದ್ಧ ಭೂಮಿಗಳಲ್ಲಿ ಸೈನಿಕರ ಬದಲಾಗಿ ಸ್ವತಃ ಹೋರಾಡುವ ಕೃತಕ ಬುದ್ಧಿಯ ಯಂತ್ರಮಾನವರು ಬಂದಾಗ, ಕೃಷಿ ಭೂಮಿಗಳಲ್ಲಿ ಹತ್ತಾರು ರೈತರು ಮಾಡುವ ಕೆಲಸಗಳನ್ನು ಯಂತ್ರವೊAದು ಕೆಲವೇ ಗಂಟೆಗಳಲ್ಲಿ ಮಾಡಿ ಮುಗಿಸುವ ಇಂದಿನ ಸಂದರ್ಭಗಳಲ್ಲಿ ರಕ್ತ-ಮಾಂಸದ ಮನುಷ್ಯನ ಸ್ಥಾನ ಎಲ್ಲಿರುತ್ತದೆ, ಪ್ರಪಂಚದ ಏರುತ್ತಿರುವ ಜನಸಂಖ್ಯೆಯ ದುಡಿಯುವ ಕೈಗಳಿಗೆ ಕೆಲಸ ಏನು, ಎಲ್ಲಿ ಎಂಬುದು ಭವಿಷ್ಯವೇ ನಿರ್ಧರಿಸಬೇಕು.
-ವಿಶ್ವನಾಥ್ ಎಡಿಕೇರಿ,
ಬೆಂಗಳೂರು.ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ

ಬೆಂಗಳೂರು.