ನಾಪೋಕ್ಲು, ಮೇ ೨: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಐಚಂಡ ಮತ್ತು ಅಲ್ಲಪಂಡ ತಂಡಗಳು ಸಮಬಲ ಸಾಧಿಸಿದವು. ಐಚಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿದರೆ ಅಲ್ಲಾರಂಡ ೭೦ ರನ್ ಗಳಿಸಿತು. ನಂತರ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಅಲ್ಲಪಂಡ ಒಂದು ವಿಕೆಟ್ ನಷ್ಟಕ್ಕೆ ೧೪ ರನ್ ಗಳಿಸಿದರೆ ಐಚಂಡ ಒಂದು ವಿಕೆಟ್ ನಷ್ಟಕ್ಕೆ ೧೬ ರನ್ ಗಳಿಸಿ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಆಲೆಮಾಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೮೧ ರನ್ ನಾಪೋಕ್ಲು, ಮೇ ೨: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಐಚಂಡ ಮತ್ತು ಅಲ್ಲಪಂಡ ತಂಡಗಳು ಸಮಬಲ ಸಾಧಿಸಿದವು. ಐಚಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿದರೆ ಅಲ್ಲಾರಂಡ ೭೦ ರನ್ ಗಳಿಸಿತು. ನಂತರ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಅಲ್ಲಪಂಡ ಒಂದು ವಿಕೆಟ್ ನಷ್ಟಕ್ಕೆ ೧೪ ರನ್ ಗಳಿಸಿದರೆ ಐಚಂಡ ಒಂದು ವಿಕೆಟ್ ನಷ್ಟಕ್ಕೆ ೧೬ ರನ್ ಗಳಿಸಿ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಆಲೆಮಾಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೮೧ ರನ್ ೪೨ ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೂಕೊಂಡ ತಂಡ ನಂದಿನೆರವAಡ ತಂಡದ ವಿರುದ್ಧ ಸ್ಪರ್ಧಿಸಿತು. ನಂದಿನೆರವAಡ ತಂಡ ೫ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿದರೆ ಮೂಕೊಂಡ ೫೪ ರನ್ ಗಳಿಸಿ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಆಲೆಮಾಡ ತಂಡ ೫ ವಿಕೆಟ್ ನಷ್ಟಕ್ಕೆ ೭೮ ರನ್ ಗಳಿಸಿತುÀ. ಐಚಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು. ಆಲೆಮಾಡ ತಂಡ ೩೫ ರನ್‌ಗಳ ಜಯ ಸಾಧಿಸಿತು. ಕರಿನೆರವಂಡ ತಂಡ ಎರಡು ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಬಲ್ಯಮೀದೇರಿರ ತಂಡ ಆರು ವಿಕೆಟ್ ನಷ್ಟಕ್ಕೆ ೬೭ ರನ್ ಗಳಿಸಿತು. ಕಳಕಮಾಡ ತಂಡ ಚಿಂಡಮಾಡ ತಂಡದ ವಿರುದ್ಧ ೨ ರನ್‌ಗಳ ಜಯ ಸಾಧಿಸಿತು. ಬೊಜ್ಜಂಗಡ ತಂಡಕ್ಕೆ ಕಾಡ್ಯಮಾಡ ವಿರುದ್ಧ ಗೆಲವು ಲಭಿಸಿತು. ಬೊಜ್ಜಂಗಡ ಐದು ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿದರೆ, ಕಾಡ್ಯಮಾಡ ತಂಡ ಒಂದು ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು. ಮುಳಿಯ ಜ್ಯುವೆಲರ್ಸ್ ವತಿಯಿಂದ ಬಾಳೆಯಡ ಕ್ರಿಕೆಟ್ ಹಬ್ಬಕ್ಕೆ ೪ ಗ್ರಾಮ್ ಚಿನ್ನವನ್ನು ಉಡುಗೊರೆ ಆಗಿ ನೀಡಲಾಯಿತು. ಅದನ್ನು ಬಾಳೆಯಡ ಕ್ರಿಕೆಟ್ ನಮ್ಮೆರ ಅಧ್ಯಕ್ಷರ ಪತ್ನಿ ಅಂಜು ಸುಬ್ರಮಣಿ ಅವರು ಸ್ವೀಕರಿಸಿದರು.

- ದುಗ್ಗಳ ಸದಾನಂದ.