ಬೇಸಿಗೆಯ ಕಾವಿಗೆ ಮತ್ತಷ್ಟು ಮೆರಗು ನೀಡುತ್ತಿರುವ ಚುನಾವಣೆಯ ಬಿಸಿಗೆ ಹಲವರು ಈಗಾಗಲೇ ಬಸವಳಿದಿದ್ದಾರೆ.
ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಅದನ್ನು ಸಾಬೀತು ಪಡಿಸಿದ ಒಂದು ಚಿತ್ರ ಹಲವಾರು ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಸಿಲುಕಿತ್ತು. ಆದರೆ ಒಳಗುಟ್ಟು ಬೇರೆಯೇ ಇರಬಹುದಾದ ಸಂಶಯಾಸ್ಪದ ನಡೆಗೆ ಕೊರತೆಯೂ ಇಲ್ಲ. ಹಲವರು ತಮ್ಮ ಮನಸಿನ ಮಾತುಗಳನ್ನು ಹಲವು ಕಡೆಗಳಲ್ಲಿ ಟಂಕಾಯಿಸಿ ಹಂಚಿಕೊಳ್ಳುವ ಮೂಲಕ ತಮ್ಮ ಅಸಮಾಧಾನ ಅಥವಾ ಹಿಗ್ಗನ್ನು ಬುಗ್ಗೆಯಾಗಿಸಿಕೊಂಡಿದ್ದಾರೆ. ಈಗಿನ ದಿನಗಳಲ್ಲಿ ರಾಜಕೀಯ ಎಂದರೆ ಅಧಿಕಾರ ದಾಹವಲ್ಲದೇ ಬೇರೇನೂ ಅಲ್ಲ ಎಂಬುದನ್ನು ಇತ್ತೀಚೆಗೆ ನಡೆದ ವಿದ್ಯಮಾನಗಳಿಂದ ನಾವೆಲ್ಲರೂ ತಿಳಿದಿದ್ದೇವೆ. ರಾಜ್ಯದ ಹಲವು ಕಡೆಗಳಲ್ಲಿ ಉಕ್ಕೇರಿದ ಆಕ್ರೋಶ ಅಥವಾ ಚೆಲ್ಲಾಡಿದ ಕಣ್ಣೀರು, ಗೆಲ್ಲುವ ಕುದುರೆ ನಮ್ಮದಾಯಿ ತೆಂದು ಹರುಷ ಗೊಂಡವರ ಹುಸಿ ನಗು, ಸಿಕ್ಕಿದ ಅವಕಾಶಗಳನ್ನು ಕಳೆದುಕೆ ÆಂಡೆವೆAದು ಕೊರಗಿದವರು, ಹಿಂದೆ ಗೈದ ತಪ್ಪುಗಳು ನೆನಪಾಗಿ ಒಂದು ವರ್ಗದ ಕ್ಷಮೆ ಕೋರಿದವರೆಲ್ಲರನ್ನೂ ನಾವು ಕಂಡಿದ್ದೇವೆ. ಇದನ್ನೆಲ್ಲಾ ಗಮನಿಸಿದರೆ ಸ್ವಾರ್ಥಪರತೆ ಮತ್ತು ಅಧಿಕಾರ ಮೋಹ ಎಂದು ಮತದಾರ ದೊರೆಗೆ ಅನಿಸುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ಮತದಾನ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗಳ ಜನ್ಮಸಿದ್ಧ ಹಕ್ಕು. ಹಾಗೆಯೇ ಗೌಪ್ಯ ಮತದಾನವೂ ಕೂಡ ಮತದಾರರ ಹಕ್ಕು. ಯಾವುದೇ ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರು ಇಂತಹ ವ್ಯಕ್ತಿಗಳಿಗೆ ಅಥವಾ ಇಂತಹ ಪಕ್ಷಗಳಿಗೆ ನಮ್ಮ ಬೆಂಬಲ ಎಂದು ಘೋಷಿಸಿದ ಬಳಿಕವೂ ಗೌಪ್ಯ ಮತದಾನದ ವೇಳೆ ಸ್ವತಃ ಅವರಿಗಷ್ಟೇ ತಿಳಿದಿರುವ ಗುಟ್ಟು ಈ ಮತದಾನ.
ಹಾಗಾಗಿ ಮತದಾನದ ಕುರಿತು ಯಾವುದೇ ಪಕ್ಷ ಅಥವಾ ಯಾವುದೇ ವ್ಯಕ್ತಿಯ ಕೆಂಗಣ್ಣಿಗೆ ಗುರಿಯಾಗದಂತೆ ಮತದಾನ ಮಾಡುವ ಅವಕಾಶ ಈ ದೇಶ ಪ್ರಜೆಗಳಿಗೆ ಇದೆ. ಹೊಟ್ಟೆಪಾಡಿಗೆ ತಲೆಗೊಂದು ಪಕ್ಷದ ಟೋಪಿ, ಕುತ್ತಿಗೆಯ ಸುತ್ತ ಒಂದು ಪಕ್ಷದ ಶಾಲು, ಕೈಯಲ್ಲಿ ಮತ್ತೊಂದು ಪಕ್ಷದ ಚಿಹ್ನೆಯನ್ನು ಎತ್ತಿ ಹಿಡಿದುಕೊಂಡು ಹಗಲೆಲ್ಲಾ ಗಂಟಲು ಹರಿಯುವಂತೆ ಕಿರುಚಿ ಸಂಜೆಯಾದೊಡನೆ ತೀರ್ಥ ಪ್ರಸಾದದ ದಾರಿ ಕಾಯುವ ಕಾರ್ಯಕರ್ತರಾಗುವುದು ಬೇಡ. ಊರಿನ, ಜಿಲ್ಲೆಯ, ರಾಜ್ಯದ, ದೇಶದ ಹಿತಾಸಕ್ತಿಯನ್ನು ಗಮನಿಸುವುದೂ ಕೂಡ ಇಂದಿನ ಮತದಾರ ಪ್ರಭುಗಳು ಮಾಡಬೇಕಾದ ಗಹನವಾದ ಕೆಲಸವಾಗಿದೆ. ಕೇವಲ ಸಣ್ಣ ಪುಟ್ಟ ಆಸೆ ಆಮಿಷಗಳಿಗೆ ಬಲಿಯಾಗಿ ಮತ ನೀಡದಿರಿ. ಹಾಗೇನಾದರೂ ಮಾಡಿದರೆ ಮುಂದಿನ ಐದು ವರ್ಷಗಳವರೆಗೆ ನಮ್ಮ ಅಭಿವೃದ್ಧಿಯ ಕನಸನ್ನು ನಾವೇ ಕೆಡಿಸಿಕೊಂಡ ಹಾಗಾಗುತ್ತದೆ. ಚುನಾವಣೆ ಹತ್ತಿರ ಬಂದAತೆ ಪರಸ್ಪರ ನಿಂದಿಸಿಕೊಳ್ಳುವ ಅಭ್ಯರ್ಥಿಗಳು ಸಹ ಫಲಿತಾಂಶ ಪ್ರಕಟವಾದ ತಕ್ಷಣ ಒಬ್ಬರನ್ನೊಬ್ಬರು ಅಭಿನಂದಿಸಿಕೊಳ್ಳುತ್ತಾ ಆಲಿಂಗಿಸಿಕೊಳ್ಳುವ ದೃಶ್ಯಗಳನ್ನು ನಾವು ಕಂಡಿದ್ದೇವೆ. ಆದರೆ ಪರಸ್ಪರ ರಕ್ತಸಂಬAಧಿಕರು ಸಹ ತಮ್ಮ ನಡುವೆ ಅಭ್ಯರ್ಥಿಗಳ ಪರ ವಿರೋಧವನ್ನು ವ್ಯಕ್ತಪಡಿಸುತ್ತಾ ಕಿತ್ತಾಡಿಕೊಂಡವರು ಆಜನ್ಮ ಶತ್ರುಗಳಂತಾಡುವುದನ್ನೂ ನಾವು ಕಂಡಿದ್ದೇವೆ. ಹಾಗಾಗಿ ಯಾರಿಗೂ ತಿಳಿಯದಂತೆ ತಮ್ಮ ಇಚ್ಛೆಯ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶದ ಸಂವಿಧಾನ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕನ್ನು ಸದ್ವಿನಿಯೋಗಪಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಆದರೆ ಯಾವುದೇ ಕಾರಣವನ್ನೂ ನೀಡದೆಯೇ ಮತದಾನದ ದಿನದಂದು ತಪ್ಪದೇ ನಮ್ಮ ಹಕ್ಕಾಗಿರುವ ಮತ ಚಲಾಯಿಸುವ ಮೂಲಕ ನಾಡಿನ, ರಾಜ್ಯದ, ನಾಯಕರ ಆಯ್ಕೆ ಮಾಡಿಕೊಳ್ಳೋಣ. ಆ ಮೂಲಕ ದೇಶದ ಚುನಾವಣಾ ವರ್ತುಲದಲ್ಲಿರುವ ನಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸೋಣ. - ವೈಲೇಶ್ ಪಿ.ಎಸ್. ಕೊಡಗು