ಮಡಿಕೇರಿ, ಮೇ ೨ : ಜಿಲ್ಲಾಡಳಿತ, ಸ್ವೀಪ್ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ತಾ. ೬ ರಂದು ಸಂಜೆ ೬.೩೦ ಗಂಟೆಗೆ ಕುಶಾಲನಗರದ ಗಣಪತಿ ದೇವಸ್ಥಾನದಿಂದ ‘ಕ್ಯಾಂಡಲ್ ದೀಪದೊಂದಿಗೆ’ ಜಾಥಾ ನಡೆಯಲಿದೆ.

ಗಣಪತಿ ದೇವಸ್ಥಾನದಿಂದ ಟೌನ್ ಕಾಲೋನಿ ಮತ್ತು ರಥ ಬೀದಿ ಮೂಲಕ ಬಸ್ ನಿಲ್ದಾಣಕ್ಕೆ ಜಾಥಾ ತಲುಪಲಿದೆ. ಜಾಥಾದಲ್ಲಿ ಪಾಲ್ಗೊಳ್ಳುವವರು ಕ್ಯಾಂಡಲ್ ಅಥವಾ ಮಣ್ಣಿನ ದೀಪವನ್ನು ತೆಗೆದುಕೊಂಡು ಬರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸಿ.ರಂಗಧಾಮಯ್ಯ ತಿಳಿಸಿದ್ದಾರೆ.