ಮಡಿಕೇರಿ, ಮೇ ೨: ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ನಡೆದ ಅಂತರ್ ಬೇಸಿಗೆ ಶಿಬಿರ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಕೊಡಗು ವಿದ್ಯಾಲಯ ಕ್ರೀಡಾ ಅಧ್ಯಕ್ಷ ರಘು ಮಾದಪ್ಪ ನೆರವೇರಿಸಿದರು. ಕೊಡಗು ವಿದ್ಯಾಲಯದಲ್ಲಿ ನಡೆದ ಈ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಕ್ರಿಕೆಟ್ ತರಬೇತಿ ಶಿಬಿರದ ವಿದ್ಯಾರ್ಥಿಗಳು ಹಾಗೂ ಕೊಡಗು ವಿದ್ಯಾಲಯದ ಶಂಕರ್ ಅಕಾಡೆಮಿ ಕ್ರಿಕೆಟ್ ತರಬೇತಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಈ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯ ಶಿಬಿರದ ಎಂಟು ಬಾಲಕಿಯರು ಹಾಗೂ ಉಡುಪಿ ತರಬೇತಿ ಶಿಬಿರದ ಓರ್ವ ಬಾಲಕಿ ಭಾಗವ ಹಿಸಿದ್ದು, ವಿಶೇಷವಾಗಿತ್ತು. ಮುಖ್ಯ ತರಬೇತುದಾರ ಉಡುಪಿ ತಂಡದ ವ್ಯವಸ್ಥಾಪಕ ರೆನ್‌ಟ್ರಾವೆರ್ ಎರಡೂ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದರು.