ಶನಿವಾರಸಂತೆ, ಏ. ೩೦: ಹಿಂದಿನ ಚುನಾವಣಾ ಅಭ್ಯರ್ಥಿ ಜೀವಿಜಯ ಅವರ ಪರವಾಗಿಯೂ ಪ್ರಚಾರಕ್ಕೆ ಬಂದಿದ್ದೆ. ಅವರಾಗಿಯೇ ಪಕ್ಷ ಬಿಟ್ಟು ಹೋದರು. ಆದರೂ ಕೊಡಗಿನಲ್ಲಿ ಜೆಡಿಎಸ್ ಬಲ ಪಡಿಸಲು ನಂಬಿಕೆಯ ಕಾರ್ಯಕರ್ತರು ನಮ್ಮ ಜತೆ ಇದ್ದಾರೆ. ಕೊಡಗಿನಲ್ಲಿ ಜೆಡಿಎಸ್ ಇಲ್ಲ ಎಂಬAತೆ ಬಿಂಬಿಸುವ ಇತರೆ ಪಕ್ಷಗಳಿಗೆ ಈಗ ಜೆಡಿಎಸ್ ಎಷ್ಟು ಸಕ್ರಿಯವಾಗಿದೆ ಎಂದು ತಿಳಿದಿದೆ. ಈ ಬಾರಿ ಅಭ್ಯರ್ಥಿ ನಾಪಂಡ ಮುತ್ತಪ್ಪನವರ ಗೆಲುವು ನಿಶ್ಚಿತ ಎಂದು ಪಕ್ಷದ ಮುಖಂಡರಾದ ಭವಾನಿ ರೇವಣ್ಣ ಆಶಾಭಾವನೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪರ ಬೈಕ್ ಜಾಥಾ ಹಾಗೂ ರೋಡ್ ಶೋ ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿ ನಾಪಂಡ ಮುತ್ತಪ್ಪ ಮಾತನಾಡಿ, ನಮ್ಮ ಹೈಕಮಾಂಡ್ ಇರುವುದು ಹೊಳೆನರಸಿಪುರದಲ್ಲಿ. ದೆಹಲಿಯಲ್ಲಿ ಅಲ್ಲ. ರೈತರ ಮಗ ಮುಖ್ಯಮಂತ್ರಿಯಾಗುವುದು ನಮ್ಮ ಹೆಮ್ಮೆ. ಚುನಾವಣೆಯಲ್ಲಿ ಜಯಗಳಿಸಿ ರಾಜ್ಯದ ಬಡವರು, ಕಾರ್ಮಿಕರು, ದಲಿತರ ಪರ ಕೆಲಸ ಮಾಡಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ತೋರಿಸುತ್ತೇವೆ ಎಂದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಗಣೇಶ್ ಮಾತನಾಡಿ, ೨೫ ವರ್ಷಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪ್ರಾದೇಶಿಕ ಪಕ್ಷ ನೆಲ-ಜಲ ರಕ್ಷಿಸುವ ಪಕ್ಷದ ಗೆಲುವಿಗೆ ಶ್ರಮಿಸೋಣ. ಈ ಚುನಾವಣೆಯಲ್ಲಿ ಶತಾಯಗತಾಯ ಜಯ ಸಾಧಿಸಿ ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಈ ಸಂದರ್ಭ ರೈತ ಸಂಘದ ಮುಖಂಡರಾದ ರೂಪಾ ಸುರೇಶ್ ಜೆಡಿಎಸ್ಗೆ ಸೇರ್ಪಡೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್ ಪಾಶ, ಉಪಾಧ್ಯಕ್ಷ ಸಂದೀಪ್, ತಾಲೂಕು ಅಧ್ಯಕ್ಷ ನಾಗರಾಜ್, ಮುಖಂಡರಾದ ಡಿ.ಪಿ. ಬೋಜಪ್ಪ, ಚೆನ್ನಬಸಪ್ಪ, ಪರಮೇಶ್, ಮುತ್ತೇಗೌಡ, ಬೆಳ್ಳಿಯಪ್ಪ, ಚಿಕ್ಕಣ್ಣ, ಅಜ್ಜಳ್ಳಿ ರವಿ, ಗಿರೀಶ್ ಇತರರು ಇದ್ದರು.