ಮಡಿಕೇರಿ, ಏ. ೩೦: ಕೊಡಗು ಜಿಲ್ಲೆಯಲ್ಲಿ ನಮೂನೆ-೧೨ಡಿ ಅಡಿಯಲ್ಲಿ ಹೆಸರು ನೋಂದಾಯಿಸಿ ಮನೆಯಿಂದಲೇ ಅಂಚೆ ಮತಪತ್ರ ಮೂಲಕ ಇದುವರೆಗೆ ೮೦ ವರ್ಷ ಮೇಲ್ಪಟ್ಟವರು ೬೩೧ ಮಂದಿ ಮತ್ತು ವಿಶೇಷಚೇತನರು ೧೬೦ ಮಂದಿ ಸೇರಿದಂತೆ ಒಟ್ಟು ೭೯೧ ಮಂದಿ ಮತದಾನ ಮಾಡಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೩೮೭ ಮಂದಿ ಮತದಾನ ಮಾಡಿದ್ದು, ಇವರಲ್ಲಿ ೮೦ ವರ್ಷ ಮೇಲ್ಪಟ್ಟವರು ೩೦೯ ಮಂದಿ ಮತ್ತು ವಿಶೇಷಚೇತನರು ೭೮ ಮಂದಿ ಮತದಾನ ಮಾಡಿದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೪೦೪ ಮಂದಿ ಮತದಾನ ಮಾಡಿದ್ದು, ಇವರಲ್ಲಿ ೮೦ ವರ್ಷ ಮೇಲ್ಪಟ್ಟವರು ೩೨೨ ಮಂದಿ ಮತ್ತು ವಿಶೇಷಚೇತನರು ೮೨ ಮಂದಿ ಮತದಾನ ಮಾಡಿದ್ದಾರೆ.