ಗೋಣಿಕೊಪ್ಪ ವರದಿ, ಏ. ೨೯: ಬೇಗೂರು ಗ್ರಾಮದ ಚೇಂದೀರ ಕುಟುಂಬದ ಗುರು ಕಾರೊಣ ಕಾರ್ಯಕ್ರಮದಲ್ಲಿ ಧನ ಸಹಾಯ ನೀಡಿದ ಚೇಂದೀರ ಮಾಚಯ್ಯ, ಶಾಂತಿ ಮಾಚಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಕುಟುಂಬದ ಅಧ್ಯಕ್ಷ ಚೇಂದೀರ ಎಂ. ಕುಟ್ಟಪ್ಪ, ಹಿರಿಯರಾದ ವಾಸು ಗಣಪತಿ, ಅಜ್ಜಿಕುಟ್ಟೀರ ಜ್ಯೋತಿ ರವಿ, ಚೊಟ್ಟೆಯಂಡಮಾಡ ಶಾಂತಿ ಗಣಪತಿ, ಚೀಯಣಮಾಡ ಅಶ್ವಿನಿ ರಾಮಣ್ಣ, ಹಿರಿಯರಾದ ಉತ್ತಯ್ಯ, ಚಂಗಪ್ಪ, ಮಹೇಶ್, ಕಾರ್ಯದರ್ಶಿ ಬೋಪಣ್ಣ ಇದ್ದರು. ಮಹಿಳೆಯರಿಗೆ ಕಡಂಬಿಟ್ಟು ಕಟ್ಟುವ ಸ್ಪರ್ಧೆಯಲ್ಲಿ ವಿನ್ಸಿ ಅಪ್ಪಣ್ಣ ಪ್ರಥಮ, ರಾಣಿ ಮಹೇಶ್ ದ್ವಿತೀಯ, ರ‍್ನ ಅಪ್ಪಣ್ಣ ತೃತೀಯ ಸ್ಥಾನ ಪಡೆದುಕೊಂಡರು.