ಚೆಯ್ಯಂಡಾಣೆ, ಏ. ೨೯: ಗುಂಡಿಕೆರೆ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುವ ಹೆಚ್.ಐ.ಜಿ. ಫ್ಯೂಚರ್ ದುಬೈ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಈದ್ ಮೀಟ್ ದುಬೈಯ ಅಲ್ ಮಂಝರ್ ಪಾರ್ಕ್ನಲ್ಲಿ ಅಧ್ಯಕ್ಷ ಸಿ.ಎಂ. ಸಲೀಂ ಅಧ್ಯಕ್ಷತೆಯಲ್ಲಿ ನಡೆಯಿತು. ಶಫೀಕ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು.
ನಂತರ ಸರ್ವ ಸದಸ್ಯರ ತೀರ್ಮಾನದಂತೆ ಹಳೆಯ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಮುಂದಿನ ಸಾಲಿಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿ.ಎಂ. ಸಲೀಂ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ಲತೀಫ್, ವೆಲ್ಫೇರ್ ಫೈನಾನ್ಸ್ ಅಧ್ಯಕ್ಷರಾಗಿ ಅಕ್ಬರ್ ಮಿತಲ್ತಂಡ, ಕೋಶಾಧಿಕಾರಿಯಾಗಿ ರಫೀಕ್ ಪುನಾರಾಯ್ಕೆ ಆದರು. ಪ್ರಧಾನ ಕಾರ್ಯದರ್ಶಿ ಸಿ.ಎ. ಲತೀಫ್ ಸ್ವಾಗತಿಸಿ, ಅಕ್ಬರ್ ವಂದಿಸಿದರು.