ನಾಪೋಕ್ಲು, ಏ. ೨೯: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ೨೦೨೩ ಶನಿವಾರದ ಪಂದ್ಯಗಳಲ್ಲಿ ಮಣವಟ್ಟಿರ, ಮುಕ್ಕಾಟಿರ , ತಂಬುಕುತ್ತೀರ ತಂಡಗಳು ಭರ್ಜರಿ ಆಟ ಪ್ರದರ್ಶನದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿದವು.
ಇಂದು ನಡೆದ ಮೊದಲ ಪಂದ್ಯದಲ್ಲಿ ಕೇತೀರ ತಂಡದ ವಿರುದ್ಧ ಮಣವಟ್ಟೀರ ತಂಡ ಒಂದು ವಿಕೆಟ್ ನಷ್ಟಕ್ಕೆ ೧೧೭ ರನ್ ಗಳಿಸಿತು. ಕೇತಿರ ತಂಡ ಮೂರು ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿ ಸೋಲು ಅನುಭವಿಸಿತು. ಮುಕ್ಕಾಟಿರ (ಕುಂಬಳದಾಳು) ತಂಡ ಚೋವಂಡ ತಂಡದ ವಿರುದ್ಧ ಒಂದು ವಿಕೆಟ್ ನಷ್ಟಕ್ಕೆ ೧೨೬ ರನ್ ಗಳಿಸಿತು. ಉತ್ತರವಾಗಿ ಆಡಿದ ಚೋವಂಡ ಮೂರು ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸಿ ಸೋಲು ಕಂಡಿತು. ಪೊದುವಾಡ ಮತ್ತು ಕೋಳುಮಾಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊದುವಾಡ ೮ ವಿಕೆಟ್‌ಗೆ ಕೇವಲ ೧೭ ರನ್‌ಗಳಿಸಿತು. ಉತ್ತರವಾಗಿ ಆಡಿದ ಕೋಳುಮಾಡಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೯ ರನ್‌ಗಳಿಸಿ ಜಯಸಾಧಿಸಿತು. ಮುಂದಿನ ಪಂದ್ಯದಲ್ಲಿ ಕಂಬೆಯAಡ ತಂಡ ಒಂಬತ್ತು ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿತು. ಕೆಚ್ಚೆಟ್ಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿ ಗೆಲುವು ಸಾಧಿಸಿತು.
ಇನ್ನೊಂದು ಪಂದ್ಯದಲ್ಲಿ ಐಚೋಡಿಯಂಡ ನಾಲ್ಕು ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿದರೆ, ಆದೇಗಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೬೧ ರನ್‌ಗಳಿಸಿ ಸೋಲನುಭವಿಸಿತು. ಕುಟ್ಟಂಡ ಮೂರು ವಿಕೆಟ್ ನಷ್ಟಕ್ಕೆ ಭರ್ಜರಿ ೧೩೨ ರನ್ ಗಳಿಸಿತು. ಉತ್ತರವಾಗಿ ಆಡಿದ ತೀತಿರ (ಹರಿಹರ) ತಂಡ ೭ ವಿಕೆಟ್ ನಷ್ಟಕ್ಕೆ ೨೯ ರನ್ ಗಳಿಸಿ ಸೋಲು ಕಂಡಿತು. ಕೋಳುಮಾಡಂಡ ೫ ವಿಕೆಟ್‌ಗೆ ೨೬ ರನ್‌ಗಳಿಸಿದರೆ, ಮುಕ್ಕಾಟಿರ (ಕುಂಬಳದಾಳು) ಯಾವದೇ ವಿಕೆಟ್ ನಷ್ಟವಿಲ್ಲದೆ ೩೦ ರನ್ ಗಳಿಸಿ ಗೆಲುವು ಸಾಧಿಸಿತು. ಮಣವಟ್ಟಿರ ಮತ್ತು ಆದೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಣವಟ್ಟಿರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೯೧ ರನ್ ಗಳಿಸಿತು. ಆದೇಂಗಡ ತಂಡ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ ೨೩ ರನ್ ಗಳಿಸಿ ಸೋಲು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ನೆರವಂಡ ತಂಡದ ವಿರುದ್ಧ ಮೇದುರ ತಂಡ ೮ ವಿಕೆಟ್ ನಷ್ಟಕ್ಕೆ ೧೫ ರನ್ ಗಳಿಸಿದರೆ, ನೆರವಂಡ ತಂಡ ವಿಕೆಟ್ ನಷ್ಟವಿಲ್ಲದೆ ೧೮ ರನ್ ಗಳಿಸಿ ಗೆಲುವು ಸಾಧಿಸಿತು. ಕೆಚೆಟ್ಟಿರ ವಿರುದ್ಧ ತಂಬುಕುತ್ತೀರ ನಾಲ್ಕು ವಿಕೆಟ್ ನಷ್ಟಕ್ಕೆ ೧೦೩ ರನ್ ಗಳಿಸಿತು. ಕೆಚೆಟ್ಟಿರ ೯ ವಿಕೆಟ್ ಕಳೆದುಕೊಂಡು ಕೇವಲ ೨೭ ರನ್ ಗಳಿಸಿ ಸೋಲು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಕಲಿಯಾಟಂಡ ಆರು ವಿಕೆಟ್ ನಷ್ಟಕ್ಕೆ ೬೩ ರನ್ ಗಳಿಸಿತು. ಉತ್ತರವಾಗಿ ಆಡಿದ ಕಾಳಚಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿ ಗೆಲುವು ಸಾಧಿಸಿತು. ಐಚೋಡಿಯಂಡ ಕುಟ್ಟಂಡ ವಿರುದ್ಧ ಒಂದು ವಿಕೆಟ್ ನಷ್ಟಕ್ಕೆ ೪೯ ರನ್ ಗಳಿಸಿದರೆ, ಕುಟ್ಟಂಡ ತಂಡ ಒಂದು ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮುಂದಿನ ಪಂದ್ಯದಲ್ಲಿ ಮಂಡುವAಡ ಕುಂಡಚ್ಚಿರ ವಿರುದ್ಧ ನಾಲ್ಕು ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿತು. ಕುಂಡಚ್ಚಿರ ಆರು ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸಿ ಸೊಲನುಭವಿಸಿತು.
-ದುಗ್ಗಳ ಸದಾನಂದ