ಮಡಿಕೇರಿ, ಏ. ೨೯ : ದೇಶದ ಸಂವಿಧಾನದಲ್ಲಿ ಎಲ್ಲಾ ಜನರಿಗೂ ಸಮಾನವಾದ ಹಕ್ಕಿದೆ. ಆದರೆ ಇದು ಸಮರ್ಪಕ ರೀತಿಯಲ್ಲಿ ಎಲ್ಲರಿಗೂ ಸಿಗುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಚಿಂತನೆಯಿದೆ, ಇದು ದೆಹಲಿಯಲ್ಲಿನ ಜನತೆಗೆ ಅನುಭವವಾಗಿದ್ದು ರಾಷ್ಟçದ ರಾಜಧಾನಿಯಲ್ಲಿ ಈ ಪಕ್ಷವೇ ಅಧಿಕಾರಕ್ಕೆ ಬರುತ್ತಿದೆ. ಇದೇ ರೀತಿಯ ಯೋಜನೆಗಳ ಅನುಷ್ಠಾನ - ಚಿಂತನೆಯೊAದಿಗೆ ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿರುವುದಾಗಿ ಆಪ್ ಅಭ್ಯರ್ಥಿ ಕೆ.ಪಿ. ಬೋಪಣ್ಣ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ಜನತೆಗೆ ಶಿಕ್ಷಣ, ಆರೋಗ್ಯ, ಮಹಿಳೆಯರಿಗೆ ಅವಕಾಶ ಸೇರಿದಂತೆ ದೇಶದ ನಾಗರಿಕರಿಗೆ ಎಲ್ಲಾ ಸವಲತ್ತುಗಳು ಸಮಾನವಾಗಿ ಸಿಗಬೇಕೆಂಬ ಉದ್ದೇಶ ಹೊಂದಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ವೈಖರಿ ಯೋಜನೆಗಳನ್ನು ಇದೀಗ ಇತರ ರಾಜ್ಯಗಳೂ ಅನುಸರಿಸುವಂತಾಗಿರುವುದು ವಿಶೇಷವಾಗಿದೆ. ಇದು ಗಮನಾರ್ಹವಾದ ಬದಲಾವಣೆಯಾಗುತ್ತಿರುವುದಾಗಿ ಹೇಳಿದರು. ದೆಹಲಿಯ ಶಾಲೆಗಳು, ಆರೋಗ್ಯ ಕೇಂದ್ರಗಳ ಸೇವೆಯನ್ನು ವಿಶ್ವದ ನಾಯಕರೂ ಅವಲೋಕಿಸುತ್ತಿದ್ದಾರೆ. ಕೆಲವು ಉಚಿತ ಸೌಲಭ್ಯಗಳನ್ನು ನೀಡುತ್ತಿರುವುದರ ಹಿಂದೆ ವ್ಯವಸ್ಥಿತವಾದ ಪರಿಣಾಮಕಾರಿಯಾದ ಪ್ರಯತ್ನವಿದೆಯೇ ಹೊರತು ಭ್ರಷ್ಟಾಚಾರವಿಲ್ಲ ಎಂದ ಅವರು ಜನತೆಗೆ ಬೇಕಾದ ಕನಿಷ್ಟ ಅಗತ್ಯತೆಗಳನ್ನು ಈ ರೀತಿಯಾಗಿ ಒದಗಿಸಲಾಗುತ್ತದೆ. ಇದು ಜನರಿಗೂ ಅರಿವಾಗಿದ್ದು ಸರಕಾರಕ್ಕೆ ಸ್ಪಂದಿಸುತ್ತಿರುವುದಾಗಿ ಹೇಳಿದರು. ಈ ಕುರಿತಾದ ಆರೋಪಗಳಲ್ಲಿ ಹುರುಳಿಲ್ಲ. ತೆರಿಗೆ ಪಾವತಿಸುವ ಜನರಿಗೆ ಅದಕ್ಕೆ ತಕ್ಕಂತೆ ಅಗತ್ಯ ಸೇವೆ ನೀಡುವುದು ಆಯಾ ಸರಕಾರದ ಜವಾಬ್ದಾರಿಯಾಗಿದ್ದು ಆಪ್ ಇದನ್ನು ಮಾಡುತ್ತಿದೆ. ಇದೇ ರೀತಿಯ ಆಡಳಿತ ರಾಜ್ಯಕ್ಕೂ ಬೇಕಿದೆ. ರಾಜ್ಯದಲ್ಲಿ ೩.೫ ಲಕ್ಷ ಕೋಟಿ ಸಾಲ ಇದೆ. ಇದು ಏಕೆ ಆಗಿದೆ ಈ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ತಮ್ಮದು... ಆದರೆ ದೆಹಲಿಯಲ್ಲಿ ಜನರ ಹಣ ಜನರಿಗೇ ಬಳಕೆಯಾಗುತ್ತಿದೆ. ಜನರಿಗೂ ಇದು ಅರಿವಾಗಿರುವುದರಿಂದ ಮುಂದೆಯೂ ಇಲ್ಲಿ ಆಪ್ ಸರಕಾರವೇ ಬರಲಿದೆ ಎಂದು ಬೋಪಣ್ಣ ಹೇಳಿದರು. ಒಬ್ಬ ಐ.ಎ.ಎಸ್. ಅಧಿಕಾರಿಯ ಮಗನೂ ಆಟೋ ಚಾಲಕನ ಮಗನೂ ಒಟ್ಟಿಗೆ ಒಂದೇ ಶಾಲೆಯಲ್ಲಿ ಓದುವಂತಾಗಬೇಕೆAಬ ಚಿಂತನೆ ಆಮ್ ಆದ್ಮಿ ಪಕ್ಷದ್ದು ಎಂದ ಅವರು ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಇಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಯಾವುದೇ ದೂರದೃಷ್ಟಿಯ ಚಿಂತನೆಗಳನ್ನು ಮಾಡಲಾಗುತ್ತಿಲ್ಲ. ಜನರಿಗೆ ಬೇಕಾದ ಕನಿಷ್ಟ ಅಗತ್ಯತೆಗಳ ಅನುಷ್ಠಾನ, ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಭ್ರಷ್ಟಾಚಾರ ರಹಿತ ಆಡಳಿತ ಇರುವ ಯೋಜನೆಗಳ ಸದ್ಬಳಕೆಗೆ ಅಡೆ-ತಡೆಯಾಗದಂತೆ ಸುಲಭ - ಸುಲಲಿತ ವ್ಯವಸ್ಥೆ ತಮ್ಮ ಗುರಿ ಎಂದು ಚಿಂತನೆಗಳ ಕುರಿತು ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ವಿಚಾರಗಳನ್ನು ಜನತೆಯ ಮುಂದಿಡಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಜನತೆಯನ್ನು ಭೇಟಿ ಮಾಡುವ ಸಂದರ್ಭ ಪೂರಕ ಸ್ಪಂದನೆ ಕಂಡುಬರುತ್ತಿದ್ದು ಜನರು ಬದಲಾವಣೆ ಬಯಸಿರುವುದು ಅನುಭವವಾಗುತ್ತಿದೆ ಎಂದು ಅವರು ತಿಳಿಸಿದರು.
ಸ್ವತಃ ತಮಗೆ ಆದ ಆನುಭವವೊಂದು ಎಲ್ಲದಕ್ಕೂ ರಾಜಕೀಯ ಶಕ್ತಿಬೇಕು ಎಂಬ ಪಾಠ ಕಲಿಸಿದ್ದು ತಾವು ಈ ಪಕ್ಷಕ್ಕೆ ಬರಲು ಕಾರಣ. ಬೆಂಗಳೂರಿನ ಸೌತ್ ಅಸೆಂಬ್ಲಿಯ ಆಪ್ ಅಧ್ಯಕ್ಷರಾಗಿರುವ ತಾವು ಅನಿವಾರ್ಯ ಕಾರಣದಿಂದಾಗಿ ತಮ್ಮದೇ ಜಿಲ್ಲೆ ಕೊಡಗಿನಿಂದ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಈ ಪಕ್ಷ ರಾಜ್ಯದಲ್ಲಿ ಬೆಳೆಯುವುದು ಖಚಿತ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.
-ಕಾಯಪಂಡ ಶಶಿ ಸೋಮಯ್ಯ