ಮಡಿಕೇರಿ, ಏ. ೩೦: ನಗರದ ಮಲ್ಲಿಕಾರ್ಜುನ ನಗÀರದಲ್ಲಿ ತಲೆಎತ್ತಿರುವ ಕೋದಂಡರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ. ೨ ರಿಂದ (ನಾಳೆಯಿಂದ) ತಾ. ೪ರ ವರೆಗೆ ಜರುಗಲಿದೆ. ತಾ. ೨ರ ಸಂಜೆ ೫ ರಿಂದ ಆಚಾರ್ಯಾದಿ ಋತ್ವಿಜರ ಸ್ವಾಗತ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಗೇಹ ಪ್ರತಿಗ್ರಹ, ಶ್ರೀಗುರು ಗಣಪತಿ ಪೂಜೆ, ಭೂಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ವಿಧಾನ, ರಾಕ್ಷೆÆÃಘ್ನ ಹೋಮ, ದಿಕ್ಪಾಲಕಬಲಿ, ದೀಪಾರಾಧನೆ, ಸುದರ್ಶನ ಹೋಮ ನಂತರ ಮಹಾಪೂಜೆ ನಡೆಯಲಿದೆ.
ತಾ. ೩ ರಂದು ಬೆಳಿಗ್ಗೆ ೭.೩೦ ರಿಂದ ಗುರು ಗಣಪತಿ ಪೂಜೆ, ಸಂಕಲ್ಪ ಗಣಪತಿ ಹೋಮ, ವೇದ ಪಾರಾಯಣ, ಸುಂದರಕಾAಡ ಪಾರಾಯಣ, ರಾಮಾಯಣ ಪಾರಾಯಣ, ನವಗ್ರಹ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ ಪ್ರಕ್ರಿಯೆ, ಶಾಂತಿ ಹೋಮ ನಡೆಯಲಿದೆ. ಸಂಜೆ ೪.೩೦ ರಿಂದ ವೇದ ಪಾರಾಯಣ, ದೇವರ ಬಿಂದ ಶಯ್ಯಾಧಿವಾಸ ಪ್ರಕ್ರಿಯೆಗಳು, ಅಧಿವಾಸ ಹೋಮ, ಬ್ರಹ್ಮಕಲಶ ಮಂಡಲ ರಚನೆ, ಶಿರಸ್ತತ್ವ ಹೋಮ, ೧೦೮ ಕಲಶ ಸಹಿತ ಬ್ರಹ್ಮ ಕಲಶಾಧಿವಾಸ, ಅಷ್ಟಬಂಧಾದಿವಾಸ, ಶಿಖರಾಧಿವಾಸ, ಬ್ರಹ್ಮಕಲಶ ಸ್ಥಾಪನೆ, ಮಹಾಪೂಜೆ, ಅಷ್ಟಾವಧಾನ ಸೇವೆ, ದೀಪಾರಾಧನೆ ಜರುಗಲಿದೆ.
ತಾ. ೪ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ವಿಶೇಷ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಪ್ರತಿಷ್ಠಾ ಹೋಮ, ಬೆಳಿಗ್ಗೆ ೭.೪೫ರ ವೃಷಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ತತ್ವಕಲಾ ಹೋಮ, ಪೂರ್ಣಾಹುತಿ, ೧೦.೦೫ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ, ವ್ಯಾಸ ಪೂಜೆ, ಅಲಂಕಾರ ಪೂಜೆ, ನೈವೇದ್ಯ ಮಹಾಪೂಜೆ, ಕ್ಷೇತ್ರದ ಮುಂದಿನ ನಿತ್ಯ ನೈಮಿತ್ತಿಕಾದಿಗಳ ಬಗ್ಗೆ ಪ್ರತಿಜ್ಞಾವಿಧಿ, ಪ್ರಸನ್ನ ಪೂಜೆ, ಆಚಾರ್ಯ ಪೂಜೆ, ಮಂಗಳ ಮಂತ್ರಾಕ್ಷತೆ, ರಾಷ್ಟಾçಶೀರ್ವಾದ ನಡೆಯಲಿದೆ. ತಾ. ೩ ಹಾಗೂ ತಾ. ೪ ರಂದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ತಾ. ೩ ಹಾಗೂ ತಾ. ೪ ರಂದು ದೇವಾಲಯದ ಮುಂಭಾಗದ ಸ್ಥಳದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ೫ ಗಂಟೆಯ ಬಳಿಕ ನಡೆಯಲಿವೆ. ತಾ. ೩ ರಂದು ಕುಶಾಲನಗರ ಎಸ್.ಎಲ್.ಎನ್. ಗ್ರೂಪ್‌ನ ಸಾತಪ್ಪನ್ ಅವರು ಸಭಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅತಿಥಿಗಳಾಗಿ ವಕೀಲ ಸುಮಂತ್ ಪಾಲಾಕ್ಷ, ಬಿಲ್ಡರ್ ಹೇಮಂತ್ ರೆಡ್ಡಿ, ನಿರಂಜನ್ ಎಂ, ನೆಲ್ಲಿತೀರ್ಥ ಗುಹಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ವೆಂಕಟರಾಜ ಭಟ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ, ಕೋದಂಡರಾಮ ದೇವಾಲಯ ಟ್ರಸ್ಟಿ ಓಬಳಿ, ಸೋಮಶೇಖರ್ ಭಾಗವಹಿಸಲಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್ ಸಂಪತ್‌ಕುಮಾರ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ, ರಾಮ ಸೇವಾ ಸಮಿತಿ ಉಪಾಧ್ಯಕ್ಷ ಪರಮೇಶ್, ಕಾರ್ಯದರ್ಶಿ ಚಂದ್ರಶೇಖರ್.ಆರ್, ಜ್ಯೋತಿ ಯುವಕ ಸಂಘದ ಅಧ್ಯಕ್ಷ ವಿಜಯ್ ಹೆಚ್.ಆರ್, ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಮಹೇಶ್ ಅವರುಗಳು ಉಪಸ್ಥಿತರಿರಲಿದ್ದಾರೆ.
ತಾ. ೪ ರಂದು ಪುತ್ತೂರಿನ ಜ್ಯೋತಿಷಿಗಳಾದ ಈ. ಗೋಪಾಲಕೃಷ್ಣ ಭಟ್ಟ ಅವರು ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಬೆಂಗಳೂರಿನ ಅಲಸೂರು ಶ್ರೀರಾಮ ಕೃಷ್ಣ ಮಠದ ಬೋಧಸ್ವರೂಪಾನಂದ ಮಹಾರಾಜ್, ಕ್ಷೇತ್ರ ತಂತ್ರಿಗಳಾದ ವೇದಮೂರ್ತಿ ಕೃಷ್ಣ ಉಪಾಧ್ಯ, ಮಡಿಕೇರಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಅವರುಗಳು ಆಶೀರ್ವಚನ ನೀಡಲಿದ್ದಾರೆ. ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಮಂಡಿರ ದೇವಿ ಪೂಣಚ್ಚ, ಡಾ. ಶ್ಯಾಂ ಅಪ್ಪಣ್ಣ, ಬಿಲ್ಡರ್ ಕಿಶೋರ್ ಬಾಬು, ಮಡಿಕೇರಿ ಶಿವ ಜ್ಯುವೆರ‍್ಸ್ನ ಮಧುಕರ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ. ರಾಜೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಎಸ್. ಸಂಪತ್‌ಕುಮಾರ್, ಪ್ರತಿಷ್ಠಾ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾಯದರ್ಶಿ ಹೆಚ್.ಎನ್. ನಂಜುAಡ, ಕೋದಂಡರಾಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಸುಧಾಕರ್, ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ಎಸ್. ಕುಶಲ, ರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಎನ್ ತಿಮ್ಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಆರ್. ವಿಶ್ವನಾಥ್ ಉಪಸ್ಥಿತರಿರಲಿದ್ದಾರೆ.