ಚೆಯ್ಯಂಡಾಣೆ, ಏ ೩೦. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಚೆಯ್ಯಂಡಾಣೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಮಾವೇಶವನ್ನು ನಡೆಸಿದರು.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದು ಇಲ್ಲಿನ ಹಾಲಿ ಶಾಸಕರು ೪ ಬಾರಿ ಆಯ್ಕೆಯಾಗಿದ್ದಾರೆ. ಅವರು ಚುನಾವಣೆಯ ಪ್ರಚಾರಕ್ಕೆ ಬಂದಾಗ ಅವರು ಮಾಡಿರುವ ಕೆಲಸಗಳು, ಅಭಿವೃದ್ಧಿಗಳ ಅಂಕಿಅAಶಗಳನ್ನು ಮಾನ್ಯ ಮತದಾರರು ಪಡೆಯಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ರಾಜಕೀಯವಾಗಿ ನನ್ನನ್ನು ಮುಂದೆ ತಂದ ಕ್ಷೇತ್ರ ಚೆಯ್ಯಂಡಾಣೆ. ಈ ಕ್ಷೇತ್ರದ ಮತದಾರರು ಮನಸು ಮಾಡಿದರೆ ನಮ್ಮ ಅಭ್ಯರ್ಥಿ ಪೊನ್ನಣ್ಣನವರನ್ನು ಗೆಲ್ಲಿಸಬಹುದು ಎಂದರು.

ಈ ಸಂದರ್ಭ ಕೆಪಿಸಿಸಿ ಪ್ರಚಾರ ಸಮಿತಿಯ ಗಿರಿಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪ್ರಚಾರ ಸಮಿತಿಯ ಶಿವು ಮಾದಪ್ಪ, ಕೋಡಿರ ವಿನೋದ್ ನಾಣಯ್ಯ, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಸುಬೈರ್, ಮಮ್ಮದ್ ಎಡಪಾಲ ಹಾಗೂ ಇತರರು ಹಾಜರಿದ್ದರು.