ಗೋಣಿಕೊಪ್ಪ ವರದಿ, ಏ. ೨೯: ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅಮ್ಮತ್ತೀರ ಕ್ರಿಕೆಟ್ ನಮ್ಮೆಗೆ ಶನಿವಾರ ಸಂಭ್ರಮದ ಚಾಲನೆ ನೀಡಲಾಯಿತು.

೨೪ ಕುಟುಂಬದ ಸದಸ್ಯರುಗಳು ಒಟ್ಟಾಗಿ ಕುಟುಂಬದ ಧ್ವಜ ಹಿಡಿದು ಮೈದಾನದಲ್ಲಿ ಮೆರವಣಿಗೆ ನಡೆಸಿದರು. ಅಮ್ಮತ್ತೀರ ಕುಟುಂಬದ ಮಹಿಳೆಯರು ಹಸಿರು ಸೀರೆ ತೊಟ್ಟು ತಳಿಯತಕ್ಕಿ ಬೆಳಕಿನೊಂದಿಗೆ ಹೆಜ್ಜೆ ಹಾಕಿದರು. ನಾಳಿಯಮಂಡ ಉಮೇಶ್ ಕೇಚಮಯ್ಯ, ನಾಳಿಯಮ್ಮಂಡ ಅಚ್ಚಮಯ್ಯ, ನಾಳಿಯಮ್ಮಂಡ ಸುರೇಶ್, ಅಣ್ಣೀರ ವಿವೇಕ್ ದುಡಿಕೊಟ್ಟ್ ಪಾಟ್ ಕಾರ್ಯಕ್ರಮ ನಡೆಸಿಕೊಟ್ಟರು. ಕುಟುಂಬದ ಮಹಿಳೆಯರು ಒಂದಾಗಿ ಪ್ರಾರ್ಥನೆ ಸಲ್ಲಿಸಿದರು. ಕಾವೇರಿ ಸಂಘದ ಮಹಿಳೆಯರು ಉಮ್ಮತ್ತಾಟ್ ಪ್ರದರ್ಶನ ನೀಡಿದರು. ಹೆಮ್ಮಚ್ಚಿಮನೆ ಲಹರಿ ನೃತ್ಯ ಮಾಡಿದರು. ಮಕ್ಕಳು ಸ್ವಾಗತ ನೃತ್ಯ ನಡೆಸಿಕೊಟ್ಟರು.

ಉದ್ಘಾಟನೆ: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಅಮ್ಮತ್ತಿರ ಕವಿನ್ ಕೃಷ್ಣಕುಮಾರ್ ಬ್ಯಾಟ್ ಮಾಡುವ ಮೂಲಕ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಉದ್ಘಾಟಿಸಿ ಮಾತನಾಡಿ, ಕೊಡಗಿನ ಮಣ್ಣಿನಲ್ಲಿ ಸಾಕಷ್ಟು ಹಾಕಿ ಆಟಗಾರರು ಅಂತರರಾಷ್ಟಿçÃಯ ಮಟ್ಟದವರೆಗೂ ಬೆಳೆದಿದ್ದಾರೆ. ಅಮ್ಮಕೊಡವ ಜನಾಂಗದಲ್ಲಿ ಕೂಡ ಅಂತರರಾಷ್ಟಿçÃಯ ಹಾಕಿ ಆಟಗಾರರನ್ನು ಕಾಣಬಹುದಾಗಿದೆ. ಹಾಕಿಯಲ್ಲಿ ಪ್ರತಿನಿಧಿಸಲು ಪಾಲಕರು ಉತ್ಸಾಹ ತೋರಬೇಕಿದೆ. ಮಕ್ಕಳ ಕ್ರೀಡಾ ಪ್ರತಿಭೆ ಅರಿತು ಮುನ್ನಡೆಸುವುದು ಕೂಡ ಪಾಲಕರ ಜವಬ್ದಾರಿಯಾಗಿದೆ. ಅಮ್ಮಕೊಡವ ನಮ್ಮೆಯಲ್ಲಿ ಕಡ್ಡಾಯವಾಗಿ ಹಾಕಿ ಕ್ರೀಡೆ ಸೇರುವಂತಾಗಬೇಕು. ಆಗ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿದೆ ಎಂದರು. ಜನಾಂಗದಲ್ಲಿ ಒಗ್ಗಟ್ಟು ಮೂಡಲು ಕುಟುಂಬದಲ್ಲಿ ಒಮ್ಮತದ ಅವಶ್ಯಕತೆ ಬೇಕಿದೆ. ಸಣ್ಣ ಸಣ್ಣ ವಿಚಾರಗಳಿಂದ ಸಂಬAದ ಕಳೆದುಕೊಳ್ಳದಂತೆ ಎಚ್ಚವಹಿಸುವುದರಿಂದ ಸಮಾಜದಲ್ಲಿ ಸುಭದ್ರತೆ ಕಾಪಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಮಕ್ಕಳು ತಮ್ಮ ಪಾಲಕರನ್ನು ಚೆನ್ನಾಗಿ ಸಾಕುತ್ತಿದ್ದರು. ಇಂತಹ ಜವಬ್ದಾರಿ ಈಗಲೂ ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್. ಪ್ರಥಯ್ಯ ಮಾತನಾಡಿ, ೮ ವರ್ಷದ ಆಚರಣೆಯಿಂದ ಜನಾಂಗದ ಕೀರ್ತಿ ಹೆಚ್ಚಿದೆ. ಅಮ್ಮತ್ತಿರ ಕುಟುಂಬದಲ್ಲಿ ಹೆಚ್ಚು ಸಾಧಕರಿದ್ದು, ಸಮುದಾಯ ದವರು ಪಾಲ್ಗೊಳ್ಳುವಿಕೆಗೆ ಮನಸ್ಸು ಮಾಡಬೇಕಿದೆ. ಅಮ್ಮಕೊಡವ ಮಕ್ಕಳು ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯಲು ಪಾಲಕರು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಇದರಿಂದ ಕ್ರೀಡಾಪಟುಗಳನ್ನು ದೇಶಕ್ಕೆ ಅರ್ಪಿಸಲು ಸಹಾಯವಾಗಲಿದೆ ಎಂದರು.

ಅಮ್ಮತ್ತಿರ ಕ್ರಿಕೆಟ್ ಕಪ್ ಅಧ್ಯಕ್ಷ ಅಮ್ಮತ್ತಿರ ಆರ್. ಪ್ರಸಾದ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮ್ಮಕೊಡವರು ಎಲ್ಲ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಮೆಚ್ಚುವಂತ ವಿಚಾರ ಎಂದರು.

ಅಮ್ಮತ್ತೀರ ಕುಟುಂಬ ಕಾರ್ಯದರ್ಶಿ ವಾಸುವರ್ಮ, ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮತ್ತೀರ ಕುಟುಂಬದ ಪ್ರಮುಖರಾದ ಎ.ಕೆ. ಅಶೋಕ್, ಎ.ಎ. ರುಕ್ಮಿಣಿ, ಎ.ವಿ. ಸರಸ್ವತಿ, ಎ.ಕೆ. ಯಮುನಾ ಇದ್ದರು.

ಫಲಿತಾಂಶ

ರಿAಕ್ ಹಾಕಿ ಪ್ರದರ್ಶನ ಪಂದ್ಯದಲ್ಲಿ ಕೊಡವ ಯುನೈಟೆಡ್ ತಂಡ ಗೆಲುವು ಪಡೆದುಕೊಂಡಿತು. ಅಮ್ಮಕೊಡವ ಆಲ್ ಸ್ಟಾರ್ ತಂಡವನ್ನು ೧೧-೮ ಗೋಲುಗಳಿಂದ ಮಣಿಸಿತು.

ಕ್ರಿಕೆಟ್ ಪ್ರದರ್ಶನ ಪಂದ್ಯದಲ್ಲಿ ಅಮ್ಮಕೊಡವ ಇಲೆವೆನ್ ತಂಡವು ಆತಿಥೇಯ ಅಮ್ಮತ್ತೀರ ತಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಅಮ್ಮತ್ತೀರ ತಂಡವು ನಿಗದಿತ ೬ ಓವರ್‌ಗಳಲ್ಲಿ ೪೭ ರನ್ ಗಳಿಸಿತು. ಅಮ್ಮಕೊಡವ ಇಲೆವೆನ್ ತಂಡವು ೧ ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿತು.

ಅಧಿಕೃತ ಪಂದ್ಯದಲ್ಲಿ ಪುತ್ತಾಮನೆ ತಂಡವು ಹೆಮ್ಮಚ್ಚಿಮನೆ ವಿರುದ್ಧ ೬ ರನ್‌ಗಳಿಂದ ಗೆದ್ದುಕೊಂಡಿತು. ಪುತ್ತಾಮನೆ ೩ ವಿಕೆಟ್‌ಗೆ ೪೭ ರನ್ ದಾಖಲಿಸಿತು. ಹೆಮ್ಮಚ್ಚಿಮನೆ ೧ ವಿಕೆಟ್ ನಷ್ಟಕ್ಕೆ ೭೧ ರನ್ ಗಳಿಸಿ ಸೋಲೊಪ್ಪಿ ಕೊಂಡಿತು. ಮಧ್ಯಾಹ್ನ ಸುರಿದ ಮಳೆಯಿಂದಾಗಿ ಉಳಿದ ಪಂದ್ಯ ಸ್ಥಗಿತಗೊಂಡಿತು.