ಮಡಿಕೇರಿ, ಏ. ೨೯: ಕೊಡಗು ಹೆಗ್ಗಡೆ ಜನಾಂಗದ ೨೦ನೇ ವರ್ಷದ ಕ್ರೀಡೋತ್ಸವಕ್ಕೆ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ ಚಾಲನೆ ನೀಡಿ ಕೊಡಗು ಹೆಗ್ಗಡೆ ಜನಾಂಗದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪರಿಣತರನ್ನು ಹೊಂದಿರುವುದು ಉತ್ತಮ ಬೆಳವಣಿಗೆಯಾಗಿದ್ದು ಈ ಕ್ರೀಡಾಕೂಟವು ಸೋಲು ಗೆಲುವಿನ ಮಾಪನವಾಗದೆ ಜನಾಂಗದ ಮೇಲಿನ ಅಭಿಮಾನವನ್ನು ವೃದ್ಧಿಸಿ ದೇಶಾಭಿ ಮಾನವನ್ನು ಇಮ್ಮಡಿಗೊಳಿಸುವ ಕಾರ್ಯವಾಗಬೇಕೆಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಕೊಡಗು ಅರಣ್ಯ ಅಪರಾಧ ಪತ್ತೆ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತುದಿಮಾಡ ಸವಿ ಮಾತನಾಡಿ ಕೊಡಗಿನಲ್ಲಿ ಕರ್ತವ್ಯದಲ್ಲಿ ಇರುವಾಗ ಮುಖ್ಯಮಂತ್ರಿ ಪದಕ ಸಿಕ್ಕಿರುವುದು ಸೌಭಾಗ್ಯವಾಗಿದ್ದು, ಜನಾಂಗ ಬಾಂಧವರು ಶ್ರಮವಹಿಸಿ ಉನ್ನತ ಹುದ್ದೆಗೇರುವುದರೊಂದಿಗೆ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕೆೆ್ಕÃರಿಸ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
೨೦೨೦ರಲ್ಲಿ ಭಾರತದ ಗಡಿಗೆ ನುಸುಳಿದ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ್ ರೆಚಿಮೆಂಟಿನ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ ಮತ್ತು ಮುಖ್ಯಮಂತ್ರಿ ಪದಕ ವಿಜೇತರಾದ ಸಬ್ ಇನ್ಸ್ಪೆಕ್ಟರ್ ಚಳಿಯಂಡ (ತುದಿಮಾಡ) ಸವಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅವರು ಮಾತನಾಡಿ, ಕ್ರೀಡಾಕೂಟದಲ್ಲಿ ಎಲ್ಲಾ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಕೊರಕುಟ್ಟೀರ ಸರ ಚಂಗಪ್ಪ ಸ್ವಾಗತಿಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಚಂಗಚAಡ ಕಟ್ಟಿಕಾವೇರಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ತೊರೇರ ಮುದ್ದಯ್ಯ, ಚರ್ಮಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಂಗೆಪAಡ ರವಿ, ಪದಿಕಂಡ ಸುನಾ, ಕೊಕ್ಕೇರ ಜಗನ್ನಾಥ್, ಚಳಿಯಂಡ ಕಮಲ, ತಂಬAಡ ಮಂಜುನಾಥ್, ಮಲ್ಲಡ ಸುತಾ, ಪುದಿಯತಂಡ ಜಾಲಿ, ಪ್ರಮುಖರಾದ ಮಳ್ಳಡ ಪೂಣಚ್ಚ, ತೊರೇರ ರಾಜ ಹಾಜರಿದ್ದರು. ಬಳಿಕ ವಿವಿಧ ಕ್ರೀಡೆಗಳು ಆರಂಭಗೊAಡವು.