ಭಾಗಮಂಡಲ, ಏ. ೨೯: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ೨೦೨೩ನ ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಧಕರನ್ನು ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಕೆದಂಬಾಡಿ ತೀರ್ಥರಾಮ ಮತ್ತು ಸಂಧ್ಯಾ ದಂಪತಿ ಪುತ್ರಿ ಮಂಜುಶ್ರೀ, ಅಂತರರಾಷ್ಟಿçÃಯ ಬಾಸ್ಕೆಟ್ಬಾಲ್ ಕ್ರೀಡಾಪಟು ಪಟ್ಟೆಮನೆ ನವನೀತ, ಅಂತರರಾಷ್ಟಿçÃಯ ಮ್ಯಾರಥಾನ್ ಓಟಗಾರ ಹೊಸೊಕ್ಲ್ಲು ಚಿನ್ನಪ್ಪ, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಹಾಗೂ ಕಾರ್ಯದರ್ಶಿ ರಕ್ಷಿತ್ ಪುತ್ತಿಲ ಅವರನ್ನು ಸನ್ಮಾನಿಸಲಾಯಿತು.