ಮಡಿಕೇರಿ, ಏ. ೨೯: ಕೊಡಗು ಗೌಡ ಫುಟ್ಬಾಲ್ ಅಸೋಸಿಯೇಶನ್ ಮತ್ತು ಪಾಣತ್ತಲೆ ಕುಟುಂಬಸ್ಥರ ಸಹಯೋಗದೊಂದಿಗೆ ಮರಗೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್ಸ್ ಹಾಗೂ ಅಂತಿಮ ಪಂದ್ಯಾವಳಿ ತಾ. ೩೦ ರಂದು (ಇಂದು) ನಡೆಯಲಿದೆ.

ಇಂದು ನಡೆದ ಪ್ರಿಕ್ವಾರ್ಟರ್ ಪಂದ್ಯಾವಳಿಯಲ್ಲಿ ಆತಿಥೇಯ ಪಾಣತ್ತಲೆ ತಂಡ ಬಾರಿಕೆ ತಂಡವನ್ನು ೨-೦ ಗೋಲಿನಿಂದ ಸೋಲಿಸಿದರೆ, ದೇವಜನ ತಂಡ ಮರದಾಳು ತಂಡವನ್ನು ೨-೧ ಗೋಲಿನಿಂದ ಮಣಿಸಿತು. ಪೊನ್ನಚನ ತಂಡ ಕತ್ರಿಕೊಲ್ಲಿ ತಂಡವನ್ನು ೧-೦ ಗೋಲಿನಿಂದ, ಕಾಂಗೀರ ತಂಡ ಕಡ್ಯದ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಮುನ್ನಡೆಯಿತು.

ನಂತರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮುಕ್ಕಾಟಿ ತಂಡ ಮಂಞAಡ್ರ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ರೋಚಕತೆಯಿಂದ ಕೂಡಿದ್ದ ಪಾಣತ್ತಲೆ ಹಾಗೂ ದೇವಜನ ತಂಡಗಳ ನಡುವಿನ ಪಂದ್ಯ ೧-೧ ಗೋಲಿನಿಂದ ಸಮನಾಯಿತು. ನಂತರ ನೀಡಲಾದ ಟೈ ಬ್ರೇಕರ್ ಅವಕಾಶದಲ್ಲಿ ಪಾಣತ್ತಲೆ ತಂಡ ೪-೩ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಬೊಳ್ಳೂರು ತಂಡ ಪೊನ್ನಚನ ತಂಡವನ್ನು ೧-೦ ಗೋಲಿನಿಂದ ಸೋಲಿಸಿದರೆ, ಮತ್ತೊಂದು ರೋಚಕ ಪಂದ್ಯ ಕಾಂಗೀರ ಹಾಗೂ ಕಲ್ಲುಮುಟ್ಲು ತಂಡಗಳ

(ಮೊದಲ ಪುಟದಿಂದ) ನಡುವೆ ನಡೆದು ಯಾವುದೇ ಗೋಲುಗಳಿಲ್ಲದೆ ಸಮನಾಂತರ ಕಾಯ್ದುಕೊಂಡವು. ಟೈ ಬ್ರೇಕರ್‌ನಲ್ಲಿ ಕಾಂಗೀರ ತಂಡ ೪-೩ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

ಸಮಾರೋಪ: ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ತಾ. ೩೦ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ. ಪಾಣತ್ತಲೆ ಸಮಿತಿ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖಜಾನೆ ಅಧಿಕಾರಿ ಪಾಣತ್ತಲೆ ನವೀನ್, ಸಾರಿಗೆ ಇಲಾಖೆ ನಿವೃತ್ತ ಅಧೀಕ್ಷಕ ಪಾಣತ್ತಲೆ ಬಿದ್ದಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣ, ಮಾಜಿ ಅಂತರರಾಷ್ಟಿçÃಯ ಫುಟ್ಬಾಲ್ ಆಟಗಾರ ಬೆಪ್ಪುರನ ಅಣ್ಣಪ್ಪ ಕುಮಾರ್, ಬೆಂಗಳೂರು ಮಹಾನಗರ ಪಾಲಿಕೆ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಸುಳ್ಯದ ವಕೀಲ ಪಾಣತ್ತಲೆ ಶ್ಯಾಂಪ್ರಸಾದ್, ಚರಂಡೇಟಿ ಅಯ್ಯಪ್ಪ ಸಂಘದ ಅಧ್ಯಕ್ಷ ಪಾಣತ್ತಲೆ ನಂಜುAಡ, ಯಡವನಾಡು ಬೆಳೆಗಾರ ಪಾಣತ್ತಲೆ ಜನಾರ್ಧನ, ಮೂರ್ನಾಡು ಗೌಡ ಸಮಾಜ ಅಧ್ಯಕ್ಷ ಪಾಣತ್ತಲೆ ಹರೀಶ್, ಮಾಜಿ ಸೈನಿಕ ಯಡಿಕೇರಿ ಕಾವೇರಿ ಹಾಲ್ ವ್ಯವಸ್ಥಾಪಕ ದೇಲಂಪಾಡಿ ಗಣೇಶ್ ಉಪಸ್ಥಿತರಿರುವರು.